Home ದಾವಣಗೆರೆ ಅಮಿತ್ ಶಾ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಲೋಕಸಭಾ ಸಚಿವಾಲಯದಿಂದ ಹಕ್ಕುಚ್ಯುತಿ ನೋಟಿಸ್, ಆಗಸ್ಟ್ 28ರೊಳಗೆ ಉತ್ತರ ನೀಡುವಂತೆ ಸೂಚನೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅಮಿತ್ ಶಾ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಲೋಕಸಭಾ ಸಚಿವಾಲಯದಿಂದ ಹಕ್ಕುಚ್ಯುತಿ ನೋಟಿಸ್, ಆಗಸ್ಟ್ 28ರೊಳಗೆ ಉತ್ತರ ನೀಡುವಂತೆ ಸೂಚನೆ!

Share
ರಾಹುಲ್ ಗಾಂಧಿ
Share

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭಾ ಸಚಿವಾಲಯ ಹಕ್ಕುಚ್ಯುತಿ  ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‌ಗೆ ಆಗಸ್ಟ್ 28, 2026 ರೊಳಗೆ ಸೂಕ್ತ ಸ್ಪಷ್ಟನೆ ಅಥವಾ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026  ಕುರಿತ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಗೃಹ ಸಚಿವರ ವಿರುದ್ಧ ನಿಯಮ 353ರ ಅಡಿಯಲ್ಲಿ ಮುಂಗಡ ನೋಟಿಸ್ ನೀಡದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಹಾಗೂ ಅಸಂಸದೀಯ ಭಾಷೆ ಬಳಸಿದ್ದಾರೆ ಎಂದು ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್ ಮತ್ತು ಡಾ. ಸಂಜಯ್ ಜೈಸ್ವಾಲ್ ದೂರು ನೀಡಿದ್ದರು.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪರವಾಗಿ ಈ ನೋಟಿಸ್ ನೀಡಲಾಗಿದ್ದು, ರಾಹುಲ್ ಗಾಂಧಿ ನೀಡುವ ಉತ್ತರವನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉತ್ತರ ತೃಪ್ತಿಕರವಾಗಿದ್ದರೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತದೆ; ಇಲ್ಲವಾದಲ್ಲಿ ರವಿಶಂಕರ್ ಪ್ರಸಾದ್ ಅಧ್ಯಕ್ಷತೆಯ ಹಕ್ಕುಚ್ಯುತಿ ಸಮಿತಿಗೆ ವಿಚಾರಣೆಗೆ ವಹಿಸಲಾಗುತ್ತದೆ.

Share

Leave a comment

Leave a Reply

Your email address will not be published. Required fields are marked *

Related Articles