Home ಕ್ರೈಂ ನ್ಯೂಸ್ ನನ್ನ ತಂದೆ ರಾಜೀವ್ ಗಾಂಧಿ ಅವರಿಗೆ ನೀಡಿದ್ದ ಭದ್ರತೆ ಹಿಂತೆಗೆದುಕೊಂಡದ್ದು ಹತ್ಯೆ ಮಾಡುವ ಉದ್ದೇಶದಿಂದಲೇ: ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನನ್ನ ತಂದೆ ರಾಜೀವ್ ಗಾಂಧಿ ಅವರಿಗೆ ನೀಡಿದ್ದ ಭದ್ರತೆ ಹಿಂತೆಗೆದುಕೊಂಡದ್ದು ಹತ್ಯೆ ಮಾಡುವ ಉದ್ದೇಶದಿಂದಲೇ: ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ

Share
ರಾಜೀವ್ ಗಾಂಧಿ
Share

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿಯೇ ಹಿಂತೆಗೆದುಕೊಳ್ಳಲಾಗಿತ್ತು ಮತ್ತು ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಆ ವಾತಾವರಣವನ್ನು ಸೃಷ್ಟಿಸಲಾಗಿತ್ತು ಎಂದು ರಾಜೀವ್ ಗಾಂಧಿ ಪುತ್ರ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಸೋನಿಯಾ ಗಾಂಧಿ ಅವರ ಹೊಸ ಆತ್ಮಕಥೆ ‘ಬೆಲಾಂಗಿಂಗ್’ (Belonging) ಕುರಿತು ತಾಯಿ ಹಾಗೂ ತಂಗಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡಿದ ವಿಡಿಯೋದಲ್ಲಿ ರಾಹುಲ್ ಗಾಂಧಿ ಈ ಅತಿಮುಖ್ಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: 

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿ ಬಲಿಯಾಗಿದ್ದರು.

ತಂದೆ ರಾಜೀವ್ ಗಾಂಧಿ ಹತ್ಯೆಗೂ ಮುನ್ನವೇ ತಾನು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾಗಿ ರಾಹುಲ್ ಗಾಂಧಿ ಸ್ಮರಿಸಿಕೊಂಡಿದ್ದಾರೆ.

1991ರಲ್ಲಿ ಬಿಹಾರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜೀವ್ ಗಾಂಧಿ ತೆರೆದ ಜೀಪಿನಲ್ಲಿ ಸಾಗುತ್ತಿದ್ದಾಗ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆ ಸಮಯದಲ್ಲಿ ತಂದೆಯ ಜೊತೆಗಿದ್ದ ರಾಹುಲ್ ಗಾಂಧಿ, “ತಂದೆಯ ಭದ್ರತೆಯ ಬಗ್ಗೆ ಏನಾದರೂ ಕ್ರಮ ಕೈಗೊಳ್ಳದಿದ್ದರೆ, ಅವರ ಅಂತ್ಯಸಂಸ್ಕಾರಕ್ಕೆ ನಾನು ಬೇಗನೇ ವಾಪಸ್ ಬರಬೇಕಾಗುತ್ತದೆ” ಎಂದು ತಾಯಿ ಸೋನಿಯಾ ಗಾಂಧಿ ಬಳಿ ಆತಂಕ ವ್ಯಕ್ತಪಡಿಸಿದ್ದರಂತೆ. ರಾಹುಲ್ ಅವರ ಈ ಭವಿಷ್ಯ ನುಡಿಯುವ ಮಾತುಗಳು ಆಗ ಕೇವಲ ತಿಂಗಳೊಳಗೆ ನಿಜವಾಗಿದ್ದವು.

ಉದ್ದೇಶಪೂರ್ವಕ ಭದ್ರತಾ ಕಡಿತ: ರಾಜೀವ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ಭದ್ರತೆಯನ್ನು ಬೇಕಂತಲೇ ತೆಗೆದುಹಾಕಲಾಗಿತ್ತು. ಇದು ಕೇವಲ ಅಪಘಾತವಲ್ಲ, ಬದಲಿಗೆ ಅವರನ್ನು ಹತ್ಯೆಗೈಯುವ ಸೃಷ್ಟಿಸಿದ ಪೂರ್ವಯೋಜಿತ ಸಂಚು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಿಹಾರ ಪ್ರಚಾರದ ಭೀಕರತೆ: 1991ರಲ್ಲಿ ಬಿಹಾರ ಪ್ರಚಾರದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರಿಯಾದ ಭದ್ರತೆ ನೀಡಲಾಗಿಲ್ಲ. ತೆರೆದ ವಾಹನದಲ್ಲಿ ಪ್ರಚಾರ ಮಾಡುವಾಗ ಕಲ್ಲುಗಳನ್ನು ತೂರಲಾಯಿತು ಮತ್ತು ಇದುವೇ ‘ಅಂತಿಮ ಘಟ್ಟ’ವಾಗಿತ್ತು ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಕುಟುಂಬದ ಆಘಾತ ಮತ್ತು ನೆನಪುಗಳು: ದೃಢ ನಿರ್ಧಾರ ಹಾಗೂ ಅಪಾರ ದುಃಖದ ನಡುವೆಯೂ ಸೋನಿಯಾ ಗಾಂಧಿ ತಮ್ಮ ಜೀವನದ ಪಯಣವನ್ನು ದೈರ್ಯದಿಂದ ಎದುರಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಸ್ಮರಿಸಿಕೊಂಡಿದ್ದಾರೆ.

ರಾಜೀವ್ ಗಾಂಧಿ ಅವರ ಹತ್ಯೆಯ ಹಿಂದಿನ ಘಟನೆಗಳು ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಗಾಂಧಿ ಕುಟುಂಬವು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವುದು ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Share

Recent Posts

Recent Comments

No comments to show.
Related Articles