
ನವದೆಹಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಧಾನಮಂತ್ರಿ ಯಂಗ್ ಅಚೀವರ್ಸ್ ಸ್ಕಾಲರ್ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ (PM-YASASVI) ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ‘ಪಿಎಂ ಯಶಸ್ವಿ ಸ್ಕಾಲರ್ಶಿಪ್ 2026’ (PM YASASVI Scholarship 2026) ಯೋಜನೆಯನ್ನು ಜಾರಿಗೆ ತಂದಿದೆ.
ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಶಾಲಾ ಹಂತದಿಂದ ಕಾಲೇಜು ಹಂತದವರೆಗೆ ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.
ಪ್ರಮುಖವಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ರೂ. ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,25,000 ರೂ.ವರೆಗೆ ವಿದ್ಯಾರ್ಥಿವೇತನ ಸಿಗಲಿದೆ.
ಈ ಯೋಜನೆಯು ಪ್ರಿ-ಮ್ಯಾಟ್ರಿಕ್ ಮತ್ತು ಪೋಸ್ಟ್-ಮ್ಯಾಟ್ರಿಕ್ ಸ್ಕಾಲರ್ಶಿಪ್ಗಳು, ಉನ್ನತ ಶಾಲಾ ಶಿಕ್ಷಣ, ಉನ್ನತ ಕಾಲೇಜು ಶಿಕ್ಷಣ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಸೇರಿದಂತೆ ಐದು ಪ್ರಮುಖ ಘಟಕಗಳನ್ನು ಹೊಂದಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತಾ ಮಾನದಂಡಗಳು: ವಿದ್ಯಾರ್ಥಿಗಳು 8 ಅಥವಾ 10ನೇ ತರಗತಿಯಲ್ಲಿ ಕನಿಷ್ಠ ಶೇ. 60 ಅಂಕಗಳನ್ನು ಪಡೆದಿರಬೇಕು. ಪೋಷಕರ ವಾರ್ಷಿಕ ಆದಾಯವು 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು.
ವರ್ಗದ ಮೀಸಲಾತಿ: ಕೇವಲ ಒಬಿಸಿ (OBC), ಇಡಬ್ಲ್ಯೂಎಸ್ (EWS) ಮತ್ತು ಡಿಎನ್ಟಿ (DNT) ವರ್ಗಕ್ಕೆ ಸೇರಿದ 9, 10, 11 ಹಾಗೂ 12ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್ಶಿಪ್ಗೆ ಅರ್ಹರಾಗಿರುತ್ತಾರೆ.
ಅಗತ್ಯವಿರುವ ದಾಖಲೆಗಳು:
ಆದಾಯ ಪ್ರಮಾಣಪತ್ರ (Income Certificate),
ಜಾತಿ ಪ್ರಮಾಣಪತ್ರ (Category Certificate),
ಆಧಾರ್ ಕಾರ್ಡ್ (Aadhar Card),
ಅಂಕಪಟ್ಟಿ (Marksheet) ಹಾಗೂ
ಬ್ಯಾಂಕ್ ಖಾತೆ ವಿವರಗಳನ್ನು ವಿದ್ಯಾರ್ಥಿಗಳು ಸಿದ್ಧವಾಗಿಟ್ಟುಕೊಳ್ಳಬೇಕು.




