ಬೆಂಗಳೂರು: ನಾಲ್ಕು ವೋಟಿಗೋಸ್ಕರ ದೇಶದ್ರೋಹಿಗಳನ್ನು ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವ ಸ್ವಾರ್ಥಿಗಳು ನಾಡಿನ ಸಿಎಂ ಆಗಲು ಹೊರಟಿರುವುದು ಕರ್ನಾಟಕದ ದುರಂತ! ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಅಂದು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವನ್ನು ಕೇವಲ ‘ಡೈವರ್ಶನ್ ಪಾಲಿಟಿಕ್ಸ್’ ಎಂದು ಲೇವಡಿ ಮಾಡಿ ಉಗ್ರರ ಪರ ನಿಂತಿದ್ದ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಿಗೆ ಈಗ ಸತ್ಯದ ದರ್ಶನವಾಗಿದೆ! ಎಂದು ಕಿಡಿಕಾರಿದ್ದಾರೆ.
ಅದೇ ಪ್ರಕರಣದ ಉಗ್ರ ಶಾರೀಕ್‌ನ ಕೃತ್ಯ ಸಾಬೀತಾಗಿದ್ದು, ಎನ್ಐಎ ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರದಲ್ಲೂ ಕೇವಲ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷದ ನೈಜ ಮುಖವಾಡ ಕಳಚಿದೆ. ದೇಶದ ಭದ್ರತೆಗಿಂತ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ. ಕಾಂಗ್ರೆಸ್ ಇನ್ನಾದರೂ ಮತಾಂಧರನ್ನು ತಮ್ಮ ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
- BJP vs Congress Karnataka
- Congress Appeasement Politics
- DK Shivakumar
- Karnataka Politics
- Mangaluru Cooker Blast Case
- National Security
- NIA Court Verdict
- R Ashoka
- Terrorist Shariq Sentence
- Vote Bank Politics
- ಆರ್ ಅಶೋಕ್
- ಎನ್ಐಎ ನ್ಯಾಯಾಲಯ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಓಲೈಕೆ ರಾಜಕಾರಣ
- ಡಿ. ಕೆ. ಶಿವಕುಮಾರ್
- ದೇಶದ್ರೋಹಿಗಳು
- ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ
- ವೋಟ್ ಬ್ಯಾಂಕ್ ಪಾಲಿಟಿಕ್ಸ್.
- ಶಾರೀಕ್ ಶಿಕ್ಷೆ





Leave a comment