ಆಪಲ್ ಪ್ರಿಯರಿಗೆ ಈ ಬಾರಿ ಅಚ್ಚರಿಯ ಸುದ್ದಿಯೊಂದು ಕಾದಿದೆ. ಪ್ರತಿ ವರ್ಷದಂತೆ ಸೆಪ್ಟೆಂಬರ್ನಲ್ಲಿ ಬೇಸ್ ಮಾಡೆಲ್ ಬಿಡುಗಡೆ ಮಾಡುವ ಬದಲು, ಆಪಲ್ ತನ್ನ ಐಫೋನ್ 18 ಬೇಸ್ ಮಾಡೆಲ್ ಬಿಡುಗಡೆಯನ್ನು 2027ರ ವಸಂತ ಕಾಲಕ್ಕೆ (Spring 2027) ಮುಂದೂಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಪ್ರಮುಖ ವೈಶಿಷ್ಟ್ಯಗಳು:
ಡಿಸ್ಪ್ಲೇ:
6.3 ಇಂಚಿನ OLED ಡಿಸ್ಪ್ಲೇ ಹೊಂದಿರಲಿದ್ದು, ಮೊದಲ ಬಾರಿಗೆ ಬೇಸ್ ಮಾಡೆಲ್ನಲ್ಲಿ 120Hz ಪ್ರೊಮೋಷನ್ (ProMotion) ತಂತ್ರಜ್ಞಾನ ನೀಡಲಾಗುತ್ತಿದೆ.
ಪ್ರೊಸೆಸರ್:
ಅತ್ಯಾಧುನಿಕ 2nm ಪ್ರೊಸೆಸ್ ತಂತ್ರಜ್ಞಾನದ ‘A20’ ಚಿಪ್ಸೆಟ್ ಅಳವಡಿಸಲಾಗುವುದು.
RAM ಮತ್ತು ಸ್ಟೋರೇಜ್:
8GB ಇಂದ 12GB ಗೆ RAM ಹೆಚ್ಚಳವಾಗುವ ಸಾಧ್ಯತೆಯಿದೆ. 256GB ಇಂದ 1TB ವರೆಗೆ ಸ್ಟೋರೇಜ್ ಆಯ್ಕೆಗಳು ಲಭ್ಯವಿರಲಿವೆ.
ಕ್ಯಾಮೆರಾ:
ಹಿಂಭಾಗದಲ್ಲಿ 48MP ಸಾಮರ್ಥ್ಯದ ಎರಡು ಕ್ಯಾಮೆರಾಗಳು ಹಾಗೂ ಮುಂಭಾಗದಲ್ಲಿ 24MP ಸೆಲ್ಫಿ ಕ್ಯಾಮೆರಾ ಇರಲಿದೆ.
ಇತರೆ:
ಆಪಲ್ನ ಸ್ವಂತ ‘C2’ 5G ಮೊಡೆಮ್ ಮತ್ತು ಸುಧಾರಿತ ಆಪಲ್ ಇಂಟೆಲಿಜೆನ್ಸ್ (AI) ವೈಶಿಷ್ಟ್ಯಗಳನ್ನು ಇದು ಹೊಂದಿರಲಿದೆ.





Leave a comment