Home ದಾವಣಗೆರೆ ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಛೀ… ಥೂ… ಅಂತ ಉಗಿಯುತ್ತಿದ್ದಾರೆ!: ಆರ್. ಅಶೋಕ್ ವಾಗ್ಬಾಣ
ದಾವಣಗೆರೆಬೆಂಗಳೂರು

ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಛೀ… ಥೂ… ಅಂತ ಉಗಿಯುತ್ತಿದ್ದಾರೆ!: ಆರ್. ಅಶೋಕ್ ವಾಗ್ಬಾಣ

Share
ಆರ್. ಅಶೋಕ್
Share

ಬೆಂಗಳೂರು: ಅನ್ನದಾತರನ್ನು ಭಿಕ್ಷುಕರಂತೆ ಕಾಣುತ್ತಿರುವ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಸ್ವಪಕ್ಷದ ಹಿರಿಯ ಶಾಸಕರೇ ಕನ್ನಡಿ ಹಿಡಿದಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಗದಗ ತಾಲೂಕಿನಲ್ಲಿ ಶೇಕಡಾ 49%ರಷ್ಟು ತೀವ್ರ ಮಳೆ ಕೊರತೆಯಾಗಿದ್ದರೂ, ಬೆಳೆ ಹಾನಿಯಾಗಿ ರೈತರು ಕಣ್ಣೀರು ಹಾಕುತ್ತಿದ್ದರೂ, ಈ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸದೆ ಕಣ್ಣಿಗೆ ಮಣ್ಣೆರಚುತ್ತಿದೆ. ಸ್ವತಃ ಕಾಂಗ್ರೆಸ್‌ನ ಹಿರಿಯ ಶಾಸಕರಾದ
ಹೆಚ್. ಕೆ. ಪಾಟೀಲ್ ಅವರೇ “ಅಕ್ಟೋಬರ್ 10ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ತೊಡೆ ತಟ್ಟಿ ಸಿಡಿದೆದ್ದಿದ್ದಾರೆ ಎಂದರೆ ಈ ಲಜ್ಜೆಗೇಡಿ ಸರ್ಕಾರ ಎಷ್ಟು ದಪ್ಪ ಚರ್ಮದ್ದು ಅಂತ ನೀವೇ ಊಹಿಸಿಕೊಳ್ಳಿ ಎಂದಿದ್ದಾರೆ.

ಹೆಲಿಕಾಪ್ಟರ್ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ, ಗದಗಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಮೇಲೆಯೂ ಬರ ಘೋಷಣೆ ಮಾಡಲು ನಿಮಗೇನು ಅಡ್ಡಿ? ರೈತರಿಗೆ ಪರಿಹಾರ ಕೊಡಲು ನಿಮ್ಮ ಖಜಾನೆಯಲ್ಲಿ ಹಣವಿಲ್ಲವೇ ಅಥವಾ ಉತ್ತರ ಕರ್ನಾಟಕದ ರೈತರ ಎಂದರೆ ನಿಮಗಷ್ಟು ನಿರ್ಲಕ್ಷ್ಯವೇ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ನಮ್ಮ ಖಡಕ್ ಎಚ್ಚರಿಕೆ:

ಕೂಡಲೇ ಬರ ಘೋಷಣೆ ಮಾಡಿ: ಗದಗ ಮಾತ್ರವಲ್ಲದೆ, ಕುಂಟು ನೆಪಹೇಳಿ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿರುವ ಉಳಿದ ಎಲ್ಲಾ ಬರಪೀಡಿತ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು.

ರೈತರಿಗೆ ಪರಿಹಾರ ಬಿಡುಗಡೆ ಮಾಡಿ: ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೂ ತಕ್ಷಣವೇ ಎಕರೆಗೆ ₹50,000 ಪರಿಹಾರ ನೀಡಬೇಕು.

ಸಿಎಂ ಡಿ. ಕೆ. ಶಿವಕುಮಾರ್ ಅವರೇ ಉತ್ತರ ಕೊಡಿ: ನಿಮ್ಮದೇ ಶಾಸಕರು ರಾಜೀನಾಮೆ ಬೆದರಿಕೆ ಹಾಕುವ ಸ್ಥಿತಿ ತಂದಿಟ್ಟಿರುವ ನೀವು, ಕೇವಲ ಶೋಕಿ ರಾಜಕಾರಣ ಮಾಡುವುದನ್ನು ಬಿಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರೈತರ ಹೊಟ್ಟೆಗೆ ಪದೇ ಪದೇ ಹೊಡೆಯುತ್ತಿರುವ ಈ ನಿರ್ದಯಿ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ! ಎಂದು ಭವಿಷ್ಯ ನುಡಿದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles