Home ದಾವಣಗೆರೆ ರಾಜಸ್ಥಾನ ರೈಲ್ವೆ ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನದ ISI ನಂಟಿದ್ದ ಇಬ್ಬರು ಪಂಜಾಬ್‌ನಲ್ಲಿ ಬಂಧನ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ರಾಜಸ್ಥಾನ ರೈಲ್ವೆ ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನದ ISI ನಂಟಿದ್ದ ಇಬ್ಬರು ಪಂಜಾಬ್‌ನಲ್ಲಿ ಬಂಧನ!

Share
ರಾಜಸ್ಥಾನ
Share

ಚಂಡೀಗಢ: ರಾಜಸ್ಥಾನದ ಶ್ರೀಗಂಗಾನಗರ ರೈಲ್ವೆ ಹಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ, ಶ್ರೀಗಂಗಾನಗರ ಪೊಲೀಸ್ ಹಾಗೂ ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದ್ದು, ಈ ಕೃತ್ಯದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ನಂಟು ಇರುವುದು ಬಹಿರಂಗಗೊಂಡಿದೆ.

ಮಹಾಕದೀಪ್ ಕೌರ್ (21) ಹಾಗೂ ದಾವಿಂದರ್ ಸಿಂಗ್ (22) ಬಂಧಿತ ಆರೋಪಿಗಳಾಗಿದ್ದಾರೆ. ಪಾಕಿಸ್ತಾನ ಮೂಲದ ‘ಚಾಚಾ’ ಮತ್ತು ‘ಶಾ’ ಎಂಬ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದ ಮಹಿಳೆಯನ್ನು ಪ್ರೀತಿಯ ಜಾಲ ಹಾಗೂ ಹಣದ ಆಮಿಷವೊಡ್ಡಿ ಐಎಸ್‌ಐ (ISI) ತನ್ನ ಕೃತ್ಯಕ್ಕೆ ಬಳಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕವ್ರತ್ತು ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪತಿಯಿಂದ ದೂರವಿದ್ದ ಮಹಾಕದೀಪ್ ಕೌರ್ ಅವರನ್ನು ಗುರಿಯಾಗಿಸಿ ಈ ಸಂಚು ರೂಪಿಸಲಾಗಿದೆ. ನವೆಂಬರ್ 3ರ ರಾತ್ರಿ ಶ್ರೀಗಂಗಾನಗರದ ರಾಮ್‌ಸಿಂಗ್‌ಪುರ ಸಮೀಪದ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿ ಹಳಿ ಹಾನಿಗೊಂಡಿತ್ತು. ಆರೋಪಿಗಳಿಂದ ಶಸ್ತ್ರಾಸ್ತ್ರಗಳು, ಕಾಟ್ರಿಡ್ಜ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಆಶ್ರಯ ಹಾಗೂ ವಾಹನ ಒದಗಿಸಿದ್ದ ಮೂವರನ್ನು ಸಹ ವಶಕ್ಕೆ ಪಡೆಯಲಾಗಿದೆ.

ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಜಾಲ: ಪ್ರೀತಿ ಹಾಗೂ ಹಣದ ಆಮಿಷವೊಡ್ಡಿ ಐಎಸ್‌ಐ (ISI) ಮಹಿಳೆಯರನ್ನು ಬಲೆಗೆ ಬೀಳಿಸಿ ಈ ರೀತಿಯ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಜಂಟಿ ಪೊಲೀಸ್ ಕಾರ್ಯಾಚರಣೆ: ರಾಜಸ್ಥಾನ ಎಟಿಎಸ್ ಮತ್ತು ಪಂಜಾಬ್ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು ಐವರನ್ನು ವಶಕ್ಕೆ ಪಡೆಯಲಾಗಿದೆ.

ಶಸ್ತ್ರಾಸ್ತ್ರಗಳು ವಶಕ್ಕೆ: ಬಂಧಿತರಿಂದ ಎರಡು ಬಂದೂಕುಗಳು, 46 ಕಾಟ್ರಿಡ್ಜ್‌ಗಳು ಹಾಗೂ 30,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles