Home ದಾವಣಗೆರೆ ತಾಯಿಯ ಅಂತ್ಯಕ್ರಿಯೆಗಾಗಿ ಹೋರಾಟ ನಿಲ್ಲಿಸಿದ್ದ ಎಕ್ಸ್-ಮುಸ್ಲಿಂ ಸಾಹಿಲ್ ಮೇಲೆ ಮುಂಬೈನಲ್ಲಿ ದಾಳಿ: ಮತ್ತೆ ಧ್ವನಿ ಎತ್ತುವ ಶಪಥ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ತಾಯಿಯ ಅಂತ್ಯಕ್ರಿಯೆಗಾಗಿ ಹೋರಾಟ ನಿಲ್ಲಿಸಿದ್ದ ಎಕ್ಸ್-ಮುಸ್ಲಿಂ ಸಾಹಿಲ್ ಮೇಲೆ ಮುಂಬೈನಲ್ಲಿ ದಾಳಿ: ಮತ್ತೆ ಧ್ವನಿ ಎತ್ತುವ ಶಪಥ

Share
ಸಾಹಿಲ್
Share

ಮುಂಬೈ: ಪ್ರಸಿದ್ಧ ಯೂಟ್ಯೂಬರ್ ಹಾಗೂ ಸಾಮಾಜಿಕ ಕಾರ್ಯಕರ್ತ ‘ಎಕ್ಸ್-ಮುಸ್ಲಿಂ ಸಾಹಿಲ್’  ಅವರ ಮೇಲೆ ಶನಿವಾರ ರಾತ್ರಿ ಮುಂಬೈನಲ್ಲಿ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಇಸ್ಲಾಂ ಧರ್ಮದ ಕುರಿತಾದ ತಮ್ಮ ಅಭಿಪ್ರಾಯಗಳಿಗಾಗಿ ಧಾರಾವಿ ಮೂಲದ ಸುಮಾರು 12 ರಿಂದ 15 ಜನರ ಗುಂಪು ತಮ್ಮನ್ನು ಹತ್ಯೆ ಮಾಡಲು ಯತ್ನಿಸಿತು ಎಂದು ಮುಖ ಹಾಗೂ ಕೈಗೆ ಗಾಯವಾಗಿ ರಕ್ತ ಸುರಿಯುತ್ತಿರುವ ಸ್ಥಿತಿಯಲ್ಲಿ ಲೈವ್ ವಿಡಿಯೋ ಮೂಲಕ ಸಾಹಿಲ್ ಹೇಳಿಕೊಂಡಿದ್ದಾರೆ.

ಶನಿವಾರ ರಾತ್ರಿ ತಮ್ಮ ಹೊಸ ಸ್ನೇಹಿತರೊಂದಿಗೆ ಮುಂಬೈನ ವಾಶಿ (Vashi) ಪ್ರದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಸಾಹಿಲ್ ವಿವರಿಸಿದ್ದಾರೆ. ತಾವು ಈ ಹಿಂದೆ ವಾಸವಿದ್ದ ಧಾರಾವಿ ಪ್ರದೇಶದಿಂದ ಬಂದ ಗುಂಪು ಏಕಾಏಕಿ ದಾಳಿ ನಡೆಸಿದ್ದು, ಆ ಸಂದರ್ಭದಲ್ಲಿ ತಮ್ಮ ಬಳಿ ಯಾವುದೇ ಆಯುಧವಿರಲಿಲ್ಲ ಹಾಗೂ ಸ್ಥಳದಿಂದ ತಪ್ಪಿಸಿಕೊಂಡು ಓಡಿಬಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸಾಹಿಲ್ ಹಂಚಿಕೊಂಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಘಟನೆ ಕುರಿತು ಮುಂಬೈ ಪೊಲೀಸರು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಹಲ್ಲೆ ಮತ್ತು ಹತ್ಯೆ ಯತ್ನದ ಆರೋಪ: ವಾಶಿ ಪ್ರದೇಶದಲ್ಲಿ ಸ್ನೇಹಿತರೊಂದಿಗಿದ್ದಾಗ ಧಾರಾವಿ ಮೂಲದ ಗುಂಪೊಂದು ಹತ್ಯೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದೆ ಎಂದು ಸಾಹಿಲ್ ಗಂಭೀರ ಆರೋಪ ಮಾಡಿದ್ದಾರೆ.

ಸಲೀಂ ವಾಸ್ತಿಕ್ ಪ್ರಕರಣದ ಉಲ್ಲೇಖ: ಕಳೆದ ಫೆಬ್ರವರಿಯಲ್ಲಿ ಗಾಜಿಯಾಬಾದ್‌ನಲ್ಲಿ ಎಕ್ಸ್-ಮುಸ್ಲಿಂ ಸಲೀಂ ವಾಸ್ತಿಕ್ ಅವರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ ರೀತಿಯಲ್ಲೇ ತಮ್ಮ ಮೇಲಿನ ದಾಳಿಕೋರರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಸಾಹಿಲ್ ಆಗ್ರಹಿಸಿದ್ದಾರೆ.

ಮತ್ತೆ ಹೋರಾಟಕ್ಕೆ ಮರಳುವ ಘೋಷಣೆ: 2025ರ ಅಕ್ಟೋಬರ್‌ನಲ್ಲಿ ತಮ್ಮ ತಾಯಿಯ ನಿಧನದ ನಂತರ, ಅವರ ಅಂತಿಮ ಆಸೆಯಂತೆ ಧಾರಾವಿ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಾಹಿಲ್ ತಮ್ಮ ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಈ ಹಲ್ಲೆಯ ಬಳಿಕ “ಇನ್ನು ಸಾಹಿಲ್ ನಿಲ್ಲುವುದಿಲ್ಲ, ಇಸ್ಲಾಂನ ಸತ್ಯವನ್ನು ಜನರಿಗೆ ತಿಳಿಸುತ್ತೇನೆ” ಎಂದು ಘೋಷಿಸಿದ್ದಾರೆ.

ಭಾರತದಲ್ಲಿ ಹಾಗೂ ಮುಂಬೈನಲ್ಲಿ ಎಕ್ಸ್-ಮುಸ್ಲಿಮರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಸಾಹಿಲ್ ಕಳವಳ ವ್ಯಕ್ತಪಡಿಸಿದ್ದು, ಎಕ್ಸ್-ಮುಸ್ಲಿಮರ ರಕ್ಷಣೆಗಾಗಿ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪೊಲೀಸರ ಮುಂದಿನ ಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles