Home ದಾವಣಗೆರೆ ಪ್ರೇಯಸಿಯ ಬ್ಲ್ಯಾಕ್‌ಮೇಲ್, ಮದುವೆ ಒತ್ತಡಕ್ಕೆ 28 ವರ್ಷದ ಯುವ ಸಬ್ ಇನ್‌ಸ್ಪೆಕ್ಟರ್ ಬಲಿ: ರೈಲು ಹಳಿಗೆ ತಲೆಕೊಟ್ಟು ಪ್ರಾಣಬಿಟ್ಟ ಎಸ್‌ಐ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪ್ರೇಯಸಿಯ ಬ್ಲ್ಯಾಕ್‌ಮೇಲ್, ಮದುವೆ ಒತ್ತಡಕ್ಕೆ 28 ವರ್ಷದ ಯುವ ಸಬ್ ಇನ್‌ಸ್ಪೆಕ್ಟರ್ ಬಲಿ: ರೈಲು ಹಳಿಗೆ ತಲೆಕೊಟ್ಟು ಪ್ರಾಣಬಿಟ್ಟ ಎಸ್‌ಐ!

Share
ಸಬ್ ಇನ್‌ಸ್ಪೆಕ್ಟರ್
Share

ಬಲ್ಲಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಪ್ರೇಯಸಿಯ ನಿರಂತರ ಬ್ಲ್ಯಾಕ್‌ಮೇಲ್ ಹಾಗೂ ಮದುವೆ ಒತ್ತಡಕ್ಕೆ ಬೇಸತ್ತು 28 ವರ್ಷದ ಯುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರೈಲು ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮೃತರನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಮೂಲದ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಕಳೆದ 11 ತಿಂಗಳಿಂದ ಬಲ್ಲಿಯಾದ ಚಿತ್‌ಬರಗಾಂವ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಎಸ್ಪಿ ಹೇಳಿದ್ದೇನು? 

ಪೊಲೀಸ್ ವರಿಷ್ಠಾಧಿಕಾರಿ (SP) ಇರಾಜ್ ರಾಜಾ ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ರಾತ್ರಿ ಅಂದಾಜು 7 ರಿಂದ 8 ಗಂಟೆಯ ಅವಧಿಯಲ್ಲಿ, ರೈಲು ಹಳಿಯ ಮೇಲೆ ಒಬ್ಬ ವ್ಯಕ್ತಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮುಂದಿನ ನಿಲ್ದಾಣದ ರೈಲು ಲೋಕೋ ಪೈಲಟ್ ನೀಡಿದ ಎಂಆರ್‌ಒ  ವರದಿ ಮೂಲಕ ಪೊಲೀಸರಿಗೆ ಮಾಹಿತಿ ಲಭ್ಯವಾಯಿತು.

ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸ್ ತಂಡಕ್ಕೆ ರೈಲು ಹಳಿಯ ಸಮೀಪದಲ್ಲೇ ಮೃತರಿಗೆ ಸೇರಿದ ಬುಲೆಟ್ ಮೋಟಾರ್ ಸೈಕಲ್ ಪಾರ್ಕ್ ಮಾಡಲಾಗಿರುವುದು ಕಂಡುಬಂದಿದೆ. ತನಿಖೆ ನಡೆಸಿದಾಗ ಮೃತ ವ್ಯಕ್ತಿ ಎಸ್‌ಐ ಸಂದೀಪ್ ಕುಮಾರ್ ಎಂಬುದು ಖಚಿತಪಟ್ಟಿದೆ.

ಪ್ರೇಮ ಸಂಬಂಧ ಮತ್ತು ಬ್ಲ್ಯಾಕ್‌ಮೇಲ್: ಮೃತ ಎಸ್‌ಐ ಸಂದೀಪ್ ಕುಮಾರ್ ಅವರು ಸಿಕಂದರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಆ ಯುವತಿ ತಕ್ಷಣವೇ ಮದುವೆಯಾಗುವಂತೆ ತೀವ್ರ ಒತ್ತಡ ಹೇರುತ್ತಿದ್ದಳು ಮತ್ತು ವಿವಿಧ ವಿಚಾರಗಳಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಯುವತಿಯ ಹಿನ್ನೆಲೆ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಇದೇ ಯುವತಿ, ಸರಿಯಾಗಿ ಎರಡು ವರ್ಷಗಳ ಹಿಂದೆ ಮತ್ತೊಬ್ಬ ಪೊಲೀಸ್ ಅಧಿಕಾರಿಯ ವಿರುದ್ಧವೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

ಕುಟುಂಬಕ್ಕೆ ಮಾಹಿತಿ ಹಾಗೂ ಮುಂದಿನ ಕ್ರಮ: ಘಟನೆಯ ಕುರಿತು ಮೃತರ ಕುಟುಂಬದವರಿಗೆ ತಕ್ಷಣವೇ ಅಧಿಕೃತ ಮಾಹಿತಿ ನೀಡಲಾಗಿದ್ದು, ಪೊಲೀಸರು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಅನಿರೀಕ್ಷಿತ ಘಟನೆಯು ಸ್ಥಳೀಯ ಪೊಲೀಸ್ ವಲಯದಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ಕೂಲಂಕಷವಾಗಿ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles