ಪುಣೆ: ಪುಣೆಯ ಖರಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ 22 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಶಿಖರ್ ಕುಮಾರ್‌ಗೌರವ್ ಸಕ್ಸೇನಾ ಅವರ ಆತ್ಮಹತ್ಯೆಗೆ ಕಾರಣವಾದ ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಅಸಭ್ಯ ವೀಡಿಯೊ ಬಳಸಿ ಟೆಕ್ಕಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಟೆಕ್ಕಿಯ ತಂದೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪುಣೆ ಪೊಲೀಸರು, ಪಟ್ನಾದಲ್ಲಿ ಆಕಾಶ್‌ಕುಮಾರ್ ಸಂಜಯ್ ಸಿಂಗ್ (18) ಮತ್ತು ರಾಜ್‌ಕುಮಾರ್ ಸಂಪೂರ್ಣ ಆನಂದ್ ಸಿಂಗ್ (22) ಎಂಬುವವರನ್ನು ಅಕ್ಟೋಬರ್ 21 ರಂದು ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ 2.22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಳ್ಳು ಪ್ರಕರಣದ ಬೆದರಿಕೆ: ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಟೆಕ್ಕಿಯನ್ನು ಸಂಪರ್ಕಿಸಿ ವಿಡಿಯೋ ಕಾಲ್ ರೆಕಾರ್ಡ್ ಮಾಡಿ, ಮಾದಕ ವಸ್ತು (ಡ್ರಗ್ಸ್) ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ 1.77 ಲಕ್ಷ ರೂ. ಸುಲಿಗೆ ಮಾಡಲಾಗಿದೆ.
ಖಾತೆಗಳ ಜಪ್ತಿ ಮತ್ತು ಹಣ ಮುಟ್ಟುಗೋಲು: ತನಿಖೆಯ ವೇಳೆ ಪೊಲೀಸರು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ, 1.14 ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ಸ್ಥಬಂಧಿಸಿದ್ದಾರೆ.
ತನಿಖೆ ಮುಂದುವರಿಕೆ: ಹಣ ಪಡೆದ ಇತರ ಶಂಕಿತರಾದ ಪಂಜಾಬ್‌ನ ಅನಿಕೆತ್ ಗುಪ್ತಾ ಹಾಗೂ ಅರುಣಾಚಲ ಪ್ರದೇಶದ ಕೃಷ್ ಕುಮಾರ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಕ್ಟೋಬರ್ 1 ರಂದು ಖರಡಿಯ ಬಹುಮಹಡಿ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ತೀವ್ರ ಆಘಾತ ಉಂಟುಮಾಡಿದ್ದು, ನ್ಯಾಯಕ್ಕಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.





Leave a comment