Home ಕ್ರೈಂ ನ್ಯೂಸ್ ‘ನಾನು ನಿನ್ನ ತಾಯಿಯ ಕೊಂದೆ’: ಹಬ್ಬದ ದಿನದಂದೇ ಪತ್ನಿ ತಲೆಗೆ ಹೊಡೆದು ಕೊಂದ ಪತಿ ಮಗನಿಗೆ ಹೇಳಿ ಪೊಲೀಸ್ ಠಾಣೆಗೆ ಶರಣು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ನಾನು ನಿನ್ನ ತಾಯಿಯ ಕೊಂದೆ’: ಹಬ್ಬದ ದಿನದಂದೇ ಪತ್ನಿ ತಲೆಗೆ ಹೊಡೆದು ಕೊಂದ ಪತಿ ಮಗನಿಗೆ ಹೇಳಿ ಪೊಲೀಸ್ ಠಾಣೆಗೆ ಶರಣು!

Share
ಪತ್ನಿ
Share

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕರ್ವ ಚೌತ್ ಹಬ್ಬದ ದಿನವೇ ಮಹಿಳೆಯೊಬ್ಬರನ್ನು ಅವರ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.

ಗ್ವಾಲಿಯರ್‌ನ ತ್ಯಾಗಿ ನಗರದಲ್ಲಿ ಆನಂದ್ ಶ್ರೀವಾಸ್ತವ ಎಂಬಾತ ತನ್ನ ಪತ್ನಿ ಮಧು ಶ್ರೀವಾಸ್ತವ (35) ಅವರ ತಲೆಗೆ ಸಣ್ಕವಾದ ವಸ್ತುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಕೃತ್ಯದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ದಂಪತಿಗೆ 2010 ರಲ್ಲಿ ಪ್ರೇಮ ವಿವಾಹವಾಗಿದ್ದು, ಓರ್ವ ಮಗ ಹಾಗೂ ಮಗಳು ಇದ್ದಾರೆ. ಹಬ್ಬದ ದಿನದಂದೇ ಕೆಲಸ ಮಾಡಲು ನಿರಾಕರಿಸಿ ಮಧು ಅವರು ಮಲಗಿದ್ದ ವೇಳೆ ದಂಪತಿ ನಡುವೆ ಜಗಳವಾಗಿದ್ದು, ನಂತರ ಆನಂದ್ ತನ್ನ ಪತ್ನಿಯನ್ನು ಕೊಲೆ ಮಾಡಿ ಮಗನ ಬಳಿ “ನಾನು ನಿಮ್ಮ ತಾಯಿಯನ್ನು ಕೊಂದುಹಾಕಿದ್ದೇನೆ” ಎಂದು ಹೇಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಕುಟುಂಬ ಕಲಹವೇ ಕಾರಣ: ಮಧು ಅವರು ತನ್ನ ಗಂಡನಿಗಿಂತ ತಮ್ಮ ತವರು ಮನೆಯ ಸಂಬಂಧಿಕರನ್ನು ಹೆಚ್ಚು ಬೆಂಬಲಿಸುತ್ತಾರೆ ಎಂಬ ಅನುಮಾನ ಹಾಗೂ ಆಕ್ರೋಶದಿಂದ ಪತಿ ಆನಂದ್ ಆಗಾಗ ಜಗಳವಾಡುತ್ತಿದ್ದ ಎಂದು ಮೃತರ ಮಗ ಪೊಲೀಸರಿಗೆ ತಿಳಿಸಿದ್ದಾನೆ.

ಮಗನ ಕಣ್ಣೀರಿನ ಆಪಾದನೆ: ಅಡುಗೆ ವಿಚಾರ ಹಾಗೂ ದಿನನಿತ್ಯದ ಕೌಟುಂಬಿಕ ಕಲಹಗಳೇ ಈ ಕೊಲೆಗೆ ಕಾರಣವಾಗಿದ್ದು, ತಾಯಿ ಮಲಗಿದ್ದಾಗ ತಂದೆ ಹಲ್ಲೆ ನಡೆಸಿರುವುದು ತನಿಖೆಯಿಂದ ಬಯಲಾಗಿದೆ.

ಪೊಲೀಸರ ವಶಕ್ಕೆ ಆರೋಪಿ: ಕೃತ್ಯ ಎಸಗಿದ ಬಳಿಕ ತಾನಾಗಿಯೇ ಠಾಣೆಗೆ ಬಂದು ಶರಣಾದ ಆನಂದ್ ಶ್ರೀವಾಸ್ತವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಹಬ್ಬದ ಸಂಭ್ರಮದಲ್ಲರಬೇಕಾದ ಕುಟುಂಬದಲ್ಲಿ ಪತಿಯ ಆಕ್ರೋಶದಿಂದಾಗಿ ತಾಯಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಅನಾಥರಾಗುವಂತಾಗಿದೆ. ಈ ಕುರಿತು ಗ್ವಾಲಿಯರ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles