ಪುಣೆ: ಮಹಾರಾಷ್ಟ್ರದ ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್‌ವಾಲ್ (26) ಅವರ ನಿಗೂಢ ಸಾವು ಪ್ರಕರಣದಲ್ಲಿ ಅತ್ಯಂತ ಮಹತ್ವದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪ್ರಮುಖ ಆರೋಪಿ ಚೇತನ್ ಚೌಧರಿ, ಕೇತನ್ ಅಗರ್‌ವಾಲ್ ಅವರನ್ನು ಲೋಹಗಡ್ ಕೋಟೆಯ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದನ್ನು ತಾನು ಕಣ್ಣಾರೆ ಕಂಡಿರುವುದಾಗಿ ಈ ಸಾಕ್ಷಿ ಸ್ಪೋಟಕ ಮಾಹಿತಿ ನೀಡಿದ್ದಾನೆ.
ಘಟನೆಯ ವಿವರ:
ಜೂನ್ 18 ರಂದು ಸಾಕ್ಷಿಯು ತನ್ನ ಸ್ನೇಹಿತನ ಕುಟುಂಬದೊಂದಿಗೆ ಲೋಹಗಡ್ ಕೋಟೆಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಮೆಟ್ಟಿಲುಗಳನ್ನು ಹತ್ತುವಾಗ ಕೇತನ್ ಹಾಗೂ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮುಂದೆ ಸಾಗುತ್ತಿದ್ದು, ಚೇತನ್ ಚೌಧರಿ ಅವರನ್ನು ಹಿಂಬಾಲಿಸುತ್ತಿದ್ದ. ಬೇಸಿಗೆಯಾಗಿದ್ದರೂ ಚೇತನ್ ಹುಡಿ ಧರಿಸಿದ್ದರಿಂದ ಆತನ ಮುಖ ಸಾಕ್ಷಿಯ ನೆನಪಿನಲ್ಲಿ ಉಳಿದಿತ್ತು.
ಸಾಕ್ಷಿಯು ನೀಡಿದ ಹೇಳಿಕೆಯಂತೆ, ಕೋಟೆಯ ಮೇಲ್ಭಾಗದಲ್ಲಿ ಸಿಯಾ ಗೋಯಲ್, ಚೇತನ್ ಕಡೆಗೆ ಸನ್ನೆ ಮಾಡಿ ತೋರಿಸಿದ ನಂತರ ಕೇತನ್ ಕಾಳಿಗೆ ಒದ್ದಿದ್ದಳು. ತಕ್ಷಣವೇ ಹಿಂದಿನಿಂದ ಓಡಿ ಬಂದ ಚೇತನ್, ಕೇತನ್ ಅಗರ್‌ವಾಲ್ ಅವರನ್ನು ಪ್ರಪಾತಕ್ಕೆ ತಳ್ಳಿದ್ದಾನೆ.
ಪ್ರತ್ಯಕ್ಷದರ್ಶಿಗೆ ಬೆದರಿಕೆ:
ಕೊಲೆಯನ್ನು ಕಂಡ ಸಾಕ್ಷಿಯು ಚೇತನ್‌ನನ್ನು ಪ್ರಶ್ನಿಸಿದಾಗ, “ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೋಟೆಯಿಂದ ಕೆಳಗೆ ತಳ್ಳಿ ಕೊಲ್ಲುತ್ತೇನೆ” ಎಂದು ಚೇತನ್ ಬೆದರಿಕೆ ಹಾಕಿದ್ದನು. ಭಯದಿಂದ ಮತ್ತು ಜ್ವರದಿಂದ ಬಳಲುತ್ತಿದ್ದ ಸಾಕ್ಷಿ, ಘಟನೆ ನಡೆದ ಐದು ದಿನಗಳ ನಂತರ (ಜೂನ್ 23) ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ಧೈರ್ಯ ಮಾಡಿ ಪೊಲೀಸರನ್ನು ಸಂಪರ್ಕಿಸಿ ಹೇಳಿಕೆ ನೀಡಿದ್ದಾನೆ.
ಡಿಜಿಟಲ್ ಪುರಾವೆ ಹಾಗೂ ದೋಷಾರೋಪಣೆ ಪಟ್ಟಿ:
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು 5,053 ಪುಟಗಳ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿದ್ದಾರೆ. ತನಿಖೆಯ ವೇಳೆ ಪೊಲೀಸರು 12 TB ಡಿಜಿಟಲ್ ಡೇಟಾ, 6 ಮೊಬೈಲ್ ಫೋನ್‌ಗಳು ಹಾಗೂ 9 ಪೆನ್‌ಡ್ರೈವ್‌ಗಳನ್ನು ಪರಿಶೀಲಿಸಿದ್ದಾರೆ. ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ಚಾಟ್‌ಗಳು ಮತ್ತು ಐಫೋನ್ ಡೇಟಾ ಅಳಿಸಿಹಾಕುವ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ ಸರ್ಚ್ ಹಿಸ್ಟರಿಯನ್ನು ವಿಧಿವಿಜ್ಞಾನ (Forensic) ತಂಡ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಪ್ರಕರಣದಲ್ಲಿ ಸಿಯಾ ಗೋಯಲ್, ಆಕೆಯ ಪ್ರಿಯಕರ ಚೇತನ್ ಚೌಧರಿ ಹಾಗೂ ಆತನ ಸ್ನೇಹಿತ ರಿತೇಶ್ ಹಾಂಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
- 5053 page chargesheet
- Chetan Chaudhary
- Digital forensic evidence
- Eyewitness statement
- Ketan Agarwal murder case
- lohagad fort murder
- Pune crime news
- Pune realtor death case
- Pune Rural Police
- Siya Goyal
- ಕೇತನ್ ಅಗರ್‌ವಾಲ್ ಕೊಲೆ ಪ್ರಕರಣ
- ಚೇತನ್ ಚೌಧರಿ
- ಪುಣೆ ಅಪರಾಧ ಸುದ್ದಿ
- ಪುಣೆ ಕ್ರೈಂ ನ್ಯೂಸ್
- ಪ್ರತ್ಯಕ್ಷದರ್ಶಿ ಹೇಳಿಕೆ
- ಲೋಹಗಡ್ ಕೋಟೆ ಸಾವು
- ಸಿಯಾ ಗೋಯಲ್





Leave a comment