SUDDIKSHANA KANNADA NEWS/ DAVANAGERE/ DATE:19-02-2024
ದಾವಣಗೆರೆ: ನಗರದ ಪಿ. ಜಿ. ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಯುವತಿ ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ.
ಹಣದ ಆಮಿಷವೊಡ್ಡಿ ಉಮಾಪತಿ ಎಂಬುವವರ ಮನೆಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಬಾಡಿಗೆಯ ಮನೆಯೊಂದರಲ್ಲಿ ಹೆಣ್ಣು ಮಕ್ಕಳನ್ನು ಬೇರೆ ಕಡೆಯಿಂದ ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ
ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಮೂವರನ್ನು ರಕ್ಷಿಸಿದ್ದಾರೆ.
ಮಾಹಿತಿ ಆಧರಿಸಿದ ದಾವಣಗೆರೆ ಹಾಗೂ ಹರಪನಹಳ್ಳಿಯ ಮಹಿಳೆಯರು ಹಾಗೂ ಬೆಳಗಾವಿಯ ಓರ್ವ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಹರಪನಹಳ್ಳಿ ತಾಲೂಕಿನ ಗಂಗಿಬಾಯಿ ಎಂಬುವವರ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಹಿಳೆ ಸಾವು:
ಬೈಕ್ ಚಲಾಯಿಸುತ್ತಿದ್ದಾಗ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಂದ ಆಯಾತಪ್ಪಿ ಬಿದ್ದು ಮಹಿಳೆಯೊಬ್ಬರು ಸಾವು ಕಂಡ ಘಟನೆ ತಾಲೂಕಿನ ಮತ್ತಿ ಕ್ಯಾಂಪ್ ಬಳಿ ಸಂಭವಿಸಿದೆ.
ಮೂಲತಃ ಚನ್ನಗಿರಿ ತಾಲೂಕಿನ ಬಸವರಾಜಪುರದ ಹಾಗೂ ನಿಟುವಳ್ಳಿ ಸರ್ಕಲ್ ನ ನಿವಾಸಿ ಸುಮಲತಾ (30) ಸಾವು ಕಂಡ ದುರ್ದೈವಿ ಎಂದು ಗುರುತಿಸಲಾಗಿದೆ. ಪತಿ ಜೊತೆ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಸುಮಲತಾ ಕೆಳಗಡೆ ಬಿದ್ದಿದ್ದು, ಅವರಿಗೆ ತೀವ್ರ ಗಾಯಗಳಾಗಿದ್ದವು. ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳುವ ಮಾರ್ಗ ಮಧ್ಯೆ ಸಾವು ಕಂಡಿದ್ದಾರೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.