Home ದಾವಣಗೆರೆ ‘ಆರ್‌ಎಸ್‌ಎಸ್‌ಗೆ ನೋಂದಣಿ ಮತ್ತು ಲೆಕ್ಕಪತ್ರದ ಪಾರದರ್ಶಕತೆ ಏಕಿಲ್ಲ?’: ಮತ್ತೆ ಕೆಣಕಿದ ಸಚಿವ ಪ್ರಿಯಾಂಕ್ ಖರ್ಗೆ ಸವಾಲು!
ದಾವಣಗೆರೆನವದೆಹಲಿಬೆಂಗಳೂರು

‘ಆರ್‌ಎಸ್‌ಎಸ್‌ಗೆ ನೋಂದಣಿ ಮತ್ತು ಲೆಕ್ಕಪತ್ರದ ಪಾರದರ್ಶಕತೆ ಏಕಿಲ್ಲ?’: ಮತ್ತೆ ಕೆಣಕಿದ ಸಚಿವ ಪ್ರಿಯಾಂಕ್ ಖರ್ಗೆ ಸವಾಲು!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೋಂದಣಿ, ಹಣಕಾಸಿನ ಮೂಲ ಹಾಗೂ ಲೆಕ್ಕಪತ್ರಗಳ ಪಾರದರ್ಶಕತೆಯ ಕುರಿತು ಕರ್ನಾಟಕ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಕಾನೂನಾತ್ಮಕ ಪ್ರಶ್ನೆಗಳನ್ನು ಎತ್ತಿದ್ದಾರೆ.

ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ನೀಡಿರುವ ಹೇಳಿಕೆಯಲ್ಲಿ, ‘®’ ಎಂದರೆ ನೋಂದಾಯಿತ ಎಂದರ್ಥ. ಅಧಿಕೃತ ನೋಂದಣಿಯಾಗುವುದರಿಂದ ಕಾನೂನಾತ್ಮಕ ಪರಿಶೀಲನೆ, ಹಣಕಾಸಿನ ವಿವಿವರಗಳು, ಪಾರದರ್ಶಕತೆ ಮತ್ತು ಜವಾಬ್ದಾರಿಗಳು ಬರುತ್ತವೆ. ಆರ್‌ಎಸ್‌ಎಸ್‌ಗೆ ಯಾರು ನಿಧಿ ನೀಡುತ್ತಾರೆ? ಹಣ ಎಲ್ಲಿಂದ ಬರುತ್ತದೆ? ಅದನ್ನು ಹೇಗೆ ಖರ್ಚು ಮಾಡಲಾಗುತ್ತದೆ? ಲೆಕ್ಕಪರಿಶೋಧನೆ ಯಾರು ಮಾಡುತ್ತಾರೆ? ಮತ್ತು ಅಂತಿಮವಾಗಿ ಯಾರು ಹೊಣೆಗಾರರು? ಎಂದು ಸಚಿವ ಖರ್ಗೆ ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್ ಬಳಿ ಮುಚ್ಚಿಡುವಂತದ್ದು ಏನೂ ಇಲ್ಲದಿದ್ದರೆ, ತಮ್ಮ ಲೆಕ್ಕಪತ್ರ ಪುಸ್ತಕಗಳನ್ನು ಸಾರ್ವಜನಿಕ ಪರಿಶೀಲನೆಗೆ ಏಕೆ ತೆರೆದಿಡಬಾರದು ಎಂದು ಅವರು ನೇರ ಸವಾಲು ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಂಸ್ಥೆಯು ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *