ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ರಾಜೀನಾಮೆಗೆ ಪಟ್ಟುಹಿಡಿದಿರುವ ರಾಜ್ಯ ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
“ಸತ್ಯವನ್ನು ಗಲಾಟೆಯಿಂದ ಮುಚ್ಚಿಹಾಕಲುಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿರುವ ಅವರು, ಹಗರಣದ ಪ್ರಮುಖ ಆರೋಪಿ ಎನ್ನಲಾದ ಬಸವರಾಜ ಕಣ್ಣಾಳೆ ಜೊತೆ ಬಿಜೆಪಿ ನಾಯಕರು ಹೊಂದಿರುವ ನಂಟಿನ ಬಗ್ಗೆ ಕೆಲ ಕಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬಸವರಾಜ ಕಣ್ಣಾಳೆ ಅಧಿಕೃತ ಬಿಜೆಪಿ ಸಭೆಗಳಲ್ಲಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದೇಕೆ? ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ ವ್ಯಕ್ತಿಯ ಬಗ್ಗೆ ಕಮಲಪಡೆಯ ನಾಯಕರು ಮೌನ ವಹಿಸಿರುವುದೇಕೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳಿಗೆ ಸವಾಲು ಹಾಕಿರುವ ಪ್ರಿಯಾಂಕ್ ಖರ್ಗೆ, ಹಗರಣದ ಪ್ರಮುಖ ಆರೋಪಿಗಳ ಜತೆ ಬಿಜೆಪಿಯ ಪ್ರಮುಖ ನಾಯಕರಿಗೆ ಇರುವ ನಂಟನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
ಕೆಪಿಎಸ್ಸಿ ಅಕ್ರಮಗಳಲ್ಲಿ ಬಂಧಿತವಾಗಿರುವ ಮಧ್ಯವರ್ತಿಗಳ ಹಿನ್ನೆಲೆ ಹಾಗೂ ಬಿಜೆಪಿಯ ಉನ್ನತ ನಾಯಕರೊಂದಿಗೆ ಅವರಿರುವ ಫೋಟೋಗಳನ್ನು ಉಲ್ಲೇಖಿಸಿರುವ ಅವರು, ಬಿಜೆಪಿ ನಾಯಕರು ತಮ್ಮ ಮೇಲಿನ ಆರೋಪಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
- Basavaraj Kannale
- CID Investigation
- DK Shivakumar
- HD Kumaraswamy
- Karnataka BJP
- Karnataka Political News
- KPSC scam
- OMR tampering.
- Priyank Kharge
- recruitment irregularities
- ಎಚ್.ಡಿ. ಕುಮಾರಸ್ವಾಮಿ
- ಕರ್ನಾಟಕ ಬಿಜೆಪಿ
- ಕರ್ನಾಟಕ ರಾಜಕೀಯ ಸುದ್ದಿ
- ಕೆಪಿಎಸ್ಸಿ ಹಗರಣ
- ಡಿ. ಕೆ. ಶಿವಕುಮಾರ್
- ನೇಮಕಾತಿ ಅಕ್ರಮ.
- ಪ್ರಿಯಾಂಕ್ ಖರ್ಗೆ
- ಬಸವರಾಜ ಕಣ್ಣಾಳೆ
- ಸಿಐಡಿ ತನಿಖೆ





Leave a comment