SUDDIKSHANA KANNADA NEWS/ DAVANAGERE/ DATE:03-06-2023
ದಾವಣಗೆರೆ(DAVANAGERE): ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಗರಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಆಗಮನ ಹಿನ್ನೆಲೆಯಲ್ಲಿ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ (DR. PRABHA MALLIKARJUN) ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದಾವಣಗೆರೆಯ ಶಾಮನೂರಿನ ಶ್ರೀರಾಮ ದೇವಸ್ಥಾನ, ಈಶ್ವರ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇಗುಲದಲ್ಲಿ ಒಳಿತಾಗಲೆಂದು ಪ್ರಾರ್ಥಿಸಿ ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN)ರಿಂದ ಶ್ರೀರಾಮ, ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ: ಪ್ರಸಾದ ಬಡಿಸಿದ ಎಸ್ಎಸ್ಎಂ (SSM) ಪತ್ನಿ(WIFE) ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಎಲ್ಲರಿಗೂ ಒಳಿತಾಗಲಿ, ಒಳ್ಳೆಯ ಆಡಳಿತ ನೀಡುವ ಮೂಲಕ ಪತಿ ಮಲ್ಲಿಕಾರ್ಜುನ್ ಅವರು ಒಳ್ಳೆಯ ಹೆಸರು ತರುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ತಮ್ಮ ಕುಟುಂಬದ ವತಿಯಿಂದ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದ ಬಡಿಸಿ ಎಸ್ಎಸ್ಎಂ ಪತ್ನಿ ಅವರು, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇನ್ನು ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN) ಅವರೇ ಸ್ವತಃ ಪ್ರಸಾದ ಬಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿಧಾನಸಭಾ ಚುನಾವಣೆ ದಿನ ಘೋಷಣೆಯಾದ ಬಳಿಕ ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಮಾವ ಡಾ. ಶಾಮನೂರು ಶಿವಶಂಕರಪ್ಪರ ಪರ ಹಗಲಿರುಳು ಪ್ರಚಾರ ನಡೆಸಿದ್ದ ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN) ಅವರು, ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ವಿಶೇಷವಾಗಿ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಅವರು, ಹೋದ ಕಡೆಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು.
ದಾವಣಗೆರೆ ಉತ್ತರ DAVANAGERE NORTH) ಮತ್ತು ದಾವಣಗೆರೆ ದಕ್ಷಿಣ (DAVANAGERE SOUTH) ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದ ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN)ಅವರಿಗೆ ಅವರ ಪುತ್ರ ಸಮರ್ಥ ಶಾಮನೂರು (SAMARTH SHAMANURU) ಹಾಗೂ ಪುತ್ರಿಯೂ ಸಾಥ್ ಕೊಟ್ಟಿದ್ದರು. ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರ ಪಾತ್ರವೂ ದೊಡ್ಡದಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮ ವಹಿಸಿದ ಪರಿ ಅನನ್ಯ ಎನ್ನೋದು ಕಾರ್ಯಕರ್ತರು ಹಾಗೂ ಮುಖಂಡರ
ಮಾತು.
ಪ್ರಭಾ ಮಲ್ಲಿಕಾರ್ಜುನ್ ಅವರು ಬಡಾವಣೆಗಳಲ್ಲಿ ಮಹಿಳೆಯರ ಜೊತೆ ಸಭೆ ನಡೆಸಿದರು. ಸಂಕಷ್ಟ ಆಲಿಸಿದರು. ಹಿರಿಯರ ಜೊತೆ ಸಂವಾದ ನಡೆಸಿದರು. ಎಲ್ಲರ ಕಷ್ಟಗಳನ್ನು ಕೇಳಿದರು. ಎಲ್ಲೇ ಹೋದರೂ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಜನರು
ಪ್ರೀತಿ, ವಿಶ್ವಾಸ ನೀಡಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ರ ಜೊತೆ ರೋಡ್ ಶೋ (ROAD SHOW) ಕೂಡ ನಡೆಸಿದ್ದರು. ಒಟ್ಟಿನಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸುತ್ತಿರುವ ಮಲ್ಲಿಕಾರ್ಜುನ್ ಅವರ ಆಗಮಿಸಿದ್ದು, ಕಾರ್ಯಕರ್ತರ ಖುಷಿ ಮುಗಿಲು ಮುಟ್ಟಿದೆ.