SUDDIKSHANA KANNADA NEWS/DAVANAGERE/DATE:30-04-2024
ಹುಬ್ಬಳ್ಳಿ: ಹಾಸನ ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ಪೆನ್ ಡ್ರೈವ್ ವೈರಲ್ ಬೆನ್ನಲ್ಲೇ ಜೆಡಿಎಸ್ ನಿಗೂಢ ಹೆಜ್ಜೆ ಇಟ್ಟಿದೆ. ಮಾತ್ರವಲ್ಲ, ಉಚ್ಚಾಟನೆ ಮಾಡದೇ ಕೇವಲ ಸಸ್ಪೆಂಡ್ ಮಾಡಿದೆ. ಇದು ಮೇಲ್ನೋಟಕ್ಕೆ ಕಣ್ಣೊರೆಸುವ ತಂತ್ರ ಎಂಬ ಆರೋಪ ಕಾಂಗ್ರೆಸ್ ನದ್ದು.
ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿಲ್ಲ, ಕೇವಲ ಅಮಾನತು ಮಾಡಲಾಗಿದೆ ಅಷ್ಟೇ ಎಂದು ಹೇಳಿದರು.
ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಸ್ ಐ ಟಿ ತನಿಖೆಗೆ ವಹಿಸಲಾಗಿದೆ. ರಾಸಲೀಲೆ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರು ತಪ್ಪಿತಸ್ಥ ಎಂಬುದು ಸಾಬೀತಾದ ಮೇಲೆ ಉಚ್ಚಾಟನೆ ಮಾಡುತ್ತೇವೆ ಎಂದು ಹೇಳಿದರು.
ಸೆಕ್ಸ್ ವಿಡಿಯೋ ಸಂಬಂಧ ಉಚ್ಚಾಟನೆ ನಡೆಸುವ ಮೂಲಕ ತಾತ್ಕಾಲಿಕ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಪ್ರಕರಣ ಉಪಯೋಗಿಸಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಹಾಗೂ ಹೆಚ್. ಡಿ. ಕುಮಾರಸ್ವಾಮಿ ಹೆಸರು ಯಾಕೆ ತರಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಹಾಗೂ ಪ್ರಜ್ವಲ್ ರೇವಣ್ಣರ ಜೊತೆ ಇರುವ ಫೋಟೋ ವೈರಲ್ ಮಾಡಲಾಗಿದೆ. ಇದರ ಹಿಂದೆ ತಂತ್ರವೇನು? ತಪ್ಪಿತಸ್ಥ ಎಂದು ಸಾಬೀತಾದ ಬಳಿಕ ಕೊನೆಯವರೆಗೂ ಉಚ್ಚಾಟನೆ ಮಾಡುತ್ತೇವೆ ಎಂದು ತಿಳಿಸಿದರು.