SUDDIKSHANA KANNADA NEWS/ DAVANAGERE/ DATE:12-12-2024
ಬೆಳಗಾವಿ: ಅಧಿಕಾರ ಬೇಕಂದ್ರೆ ಒದ್ದು ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳುವ ಮೂಲಕ ಸಿಎಂ ಖುರ್ಚಿಗೆ ಮತ್ತೆ ಟವಲ್ ಹಾಕಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಅಧಿಕಾರ ಸುಮ್ಮನೆ ಸಿಗುವುದಿಲ್ಲ. ಅದಕ್ಕೆ ಸಾಕಷ್ಟು ಹೋರಾಟ ಬೇಕು. ಅಧಿಕಾರ ಬೇಕಾದ್ರೆ ಒದ್ದು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು ಎಂದು ವಿಶ್ಲೇಷಿಸಲಾಗುತ್ತಿದೆ.
ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ಕೂಡ ನಡೆಯಿತು. ಎಸ್. ಎಂ. ಕೃಷ್ಣ ಅವರು ಸಿಎಂ ಆಗಿದ್ದಾಗ ಸಚಿವ ಸ್ಥಾನಕ್ಕೆ ಮನೆ ಬಾಗಿಲು ಒದ್ದಿದ್ದೆ. ಎಸ್. ಎಂ. ಕೃಷ್ಣ ಅವರು ಜ್ಯೋತಿಷ್ಯ ಪ್ರಕಾರ ನಿನ್ನ ಗ್ರಹಗತಿ ಸರಿಯಿಲ್ಲ ಎಂದು ಹೇಳಿದ್ದರು. ಬಳಿಕ ರಾತ್ರೋರಾತ್ರಿ ನನಗೆ ಸಚಿವ ಸ್ಥಾನ ನೀಡಲಾಯಿತು. ಬೆಳಿಗ್ಗೆ ರಾಜ್ಯಪಾಲರಿಂದ ಫೋನ್ ಬಂದಿತ್ತು. ಆಮೇಲೆ ಹೈಕಮಾಂಡ್ ಗೆ ಹೋಗಿ ಸಚಿವ ಸ್ಥಾನ ಪಡೆದೆ ಎಂದರು.
ಆಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ನಿಮ್ಮ ಪರವಾಗಿಯೇ ಇದ್ದೇವೆ. ಯಾವಾಗ ಸಿಎಂ ಆಗುತ್ತೀರಾ ಎಂದು ಹೇಳಿ. ನೀವು ಎಲ್ಲಿ ಹೋಗುತ್ತೀರಾ ಎಂಬುದು ಗೊತ್ತು. ಅಧಿಕಾರ ಕಿತ್ತುಕೊಳ್ಳಬೇಕು, ಒದ್ದು ಪಡೆಯಬೇಕೆಂಬ ಮಾತು ಇಲ್ಲಿಯವರಿಗೆಲ್ಲರಿಗೂ ಇದೇ ಪಾಠನಾ? ಮುಖ್ಯಮಂತ್ರಿ ಪದವಿನಾ ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ? ಯಾವಾಗ ಮುಹೂರ್ತ ಜ್ಯೋತಿಷಿಗಳು ಫಿಕ್ಸ್ ಮಾಡಿದ್ದೀರಾ ಎಂದು ಕಿಚಾಯಿಸಿದರು.
ನೀವು ಎಲ್ಲೆಲ್ಲಿ ಹೋಗ್ತೀರಾ ಗೊತ್ತು. ಡಿ. ಕೆ. ಶಿವಕುಮಾರ್ ಗೆ ಯಾರು ಹೇಳಿದ್ದಾರೋ ಅವರು ನನಗೆ ಗೊತ್ತು. ಡಿ. ಕೆ. ಶಿವಕುಮಾರ್ ಜನವರಿಯೊಳಗೆ ಮುಖ್ಯಮಂತ್ರಿಯಾಗುತ್ತಾರೆ. ಇಲ್ಲದಿದ್ಜರೆ ಆಮೇಲೆ ಕಷ್ಟ. ಜನವರಿಯೊಳಗೆ ಛಲ, ರೋಷ,
ವೇಷ ತೋರಿಸಿ ಬೇಗ ಅಧಿಕಾರ ಕಿತ್ತುಕೊಳ್ಳಿ ಎಂದು ವ್ಯಂಗ್ಯವಾಡಿದರು.