SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: ಮಾರ್ಚ್ 19 ಹಾಗೂ 20 ರಂದು ದುರ್ಗಾಂಬಿಕಾ ತಾಯಿ ಹಾಗೂ ವಿನೋಬನಗರದ ಶ್ರೀ ಚೌಡಶ್ವರಿ ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆಗೆ ನಿಷೇಧ ಹೇರಲಾಗಿದೆ. ಪೊಲೀಸ್ ಇಲಾಖೆಯು ಕೆಲ ಸೂಚನೆಗಳನ್ನು ಕೊಟ್ಟಿದೆ.
ಮೌಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆವಹಿಸುವುದು. ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಮತ್ತು ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆ ಯಾರೂ ಕೂಡ
ಆಚರಣೆ ಮಾಡದೆ ಕಾನೂನು ಪಾಲನೆ ಮಾಡಬೇಕು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಆವರಣದ ಸುತ್ತ ಮುತ್ತ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ಮಾಡುವುದಕ್ಕೆ
ಅವಕಾಶ ಇಲ್ಲ.
ಜಾತ್ರೆಯ ಸಮಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ನಂಬರ್ ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜಾತ್ರೆ ಹಬ್ಬ, ಮೆರವಣಿಗೆ, ಕಾರ್ಯಾಕ್ರಮ ನಡೆಸುವ ಬಗ್ಗೆ ಹಾಗೂ ಫ್ಲೆಕ್ಸ್, ಬ್ಯಾನರ್ಸ್ ಗಳನ್ನು ಹಾಕಲು ಸಂಬಂಧಪಟ್ಟ ಚುನಾವಣಾ
ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.
ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆಗೆ ನಿಷೇಧವಿದ್ದು, ಯಾರೂ ಕೂಡ ಮೌಢ್ಯಾಚರಣೆ ಮಾಡಬಾರದು. ಪ್ರಾಣಿ ಬಲಿ ಮಾಡಬಾರದು, ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.
ದೇವಸ್ಮಾನ ಆವರಣ ಹಾಗೂ ಜಾತ್ರೆಯ ಸಮಯದಲ್ಲಿ ಅಹಿತಕರ ಘಟನೆಗಳು ಜರುಗಿದಾಗ ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಲೋಕಸಭಾ ಚುನಾವಣೆ ನೀತಿ ಸಂಹಿತ ಜಾರಿಯಲ್ಲಿರುವುದರಿಂದ ಯಾರೂ ಉಲ್ಲಂಘಿಸಬಾರದು ಎಂದು ಸೂಚನೆ ನೀಡಿದೆ.