SUDDIKSHANA KANNADA NEWS/ DAVANAGERE/ DATE:17-08-2023
ದಾವಣಗೆರೆ: ಗ್ರಾಮ್ ಒನ್ ಕಚೇರಿಯಲ್ಲಿ ಕಳ್ಳತನದ ಮಾಡಿದ್ದ ಆರೋಪಿಗಳನ್ನು ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸರು (Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ಖಾದರ್ ಜಿಲಾನಿ, ಸಾದಿಕ್, ನಯಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಎಲ್ ಜಿ ಕಂಪೆನಿಯ ಮಾನಿಟರ್, ಒಂದು ಸಿಪಿಯು, ಒಂದು ಎಪ್ಪಾನ್ ಕಂಪೆನಿಯ ಪ್ರಿಂಟರ್, ಒಂದು ಲ್ಯಾಮಿನೇಷನ್ ಯಂತ್ರ ಸೇರಿದಂತೆ 55,500 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸುದ್ದಿಯನ್ನೂ ಓದಿ:
Intelligence Dog : ಒಸಮಾ ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನ ದಾವಣಗೆರೆಯಲ್ಲಿ: ಅಪರಾಧಿಗಳಿಗೆ ನಡುಕ ಹುಟ್ಟಿಸಿರೋ ಚಾಣಾಕ್ಷ ಡಾಗ್ ಗೆ ಟ್ರೈನಿಂಗ್ ಹೇಗಿರುತ್ತೆ, ಆಹಾರ ಏನು, ಆಯಸ್ಸು ಎಷ್ಟು..? ಕುತೂಹಲಕಾರಿ ಸ್ಟೋರಿ ಇದು
ಹೆಚ್ಚುವರಿ ಪೊಲೀಸ್ (Police) ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಚನ್ನಗಿರಿ ಪೊಲೀಸ್ (Police) ಉಪಾಧೀಕ್ಷಕ ಡಾ. ಕೆ. ಎಂ. ಸಂತೋಷ್ ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು, ಬಸವಾಪಟ್ಟಣ ಪೊಲೀಸ್ (Police) ಠಾಣೆಯ ಪಿಎಸ್ ಐಗಳಾದ ಹೆಚ್. ಕೆ. ವೀಣಾ ಮತ್ತು ಜೆ. ಇ. ಭಾರತಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು, ಬಸವಾಪಟ್ಟಣ ಪೊಲೀಸ್ (Police) ಠಾಣೆ ಸಿಬ್ಬಂದಿಯಾದ ಎಎಸ್ಐ ದೊಡ್ಡಬಸಪ್ಪ, ಇಬ್ರಾಹಿಂ, ಪ್ರಕಾಶ, ಅಣ್ಣೇಶ, ರವೀಂದ್ರ ವೈ. ಹಾವೇರಿ, ಅಂಜಿನಪ್ಪ, ಜಗದೀಶ ಜಿ.ವಿ., ಸಂತೋಷ್ ರ ಕಾರ್ಯವನ್ನು ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರು ಪ್ರಶಂಸಿಸಿದ್ದಾರೆ.