Home ರೈಲು ಇಂಜಿನ್‌ನಲ್ಲಿ ಸಿಲುಕಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಿಸಿದ ರೈಲ್ವೆ ಸಿಬ್ಬಂದಿ: ಹೃದಯಸ್ಪರ್ಶಿ ಘಟನೆಗೆ ಜನರ ಬಹುಪರಾಕ್!
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೈಲು ಇಂಜಿನ್‌ನಲ್ಲಿ ಸಿಲುಕಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಿಸಿದ ರೈಲ್ವೆ ಸಿಬ್ಬಂದಿ: ಹೃದಯಸ್ಪರ್ಶಿ ಘಟನೆಗೆ ಜನರ ಬಹುಪರಾಕ್!

Share
ನವಿಲು
Share

ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನ ಇಂಜಿನ್ ಒಳಗಡೆ ಸಿಲುಕಿಕೊಂಡಿದ್ದ ನವಿಲು ಅಪಾಯದಿಂದ ಪಾರು ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ. ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯರು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮಹಾರಾಷ್ಟ್ರದ ಶೆಗಾಂವ್ ರೈಲು ನಿಲ್ದಾಣದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.

ಭುಸಾವಲ್‌ನಿಂದ ಬಡ್ನೇರಾಗೆ ಸಂಚರಿಸುತ್ತಿದ್ದ MEMU ಪ್ಯಾಸೆಂಜರ್ ರೈಲಿನ ಇಂಜಿನ್ ಮುಂಭಾಗದಲ್ಲಿ ರಾಷ್ಟ್ರಪಕ್ಷಿ ನವಿಲು ಸಿಲುಕಿಕೊಂಡಿತ್ತು. ರೈಲು ಶೆಗಾಂವ್ ನಿಲ್ದಾಣಕ್ಕೆ ತಲುಪಿದಾಗ ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ, ಸರ್ಕಾರಿ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಯಾಣಿಕರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ನವಿಲಿಗೆ ಯಾವುದೇ ಗಾಯವಾಗದಂತೆ ಅತ್ಯಂತ ತಾಳ್ಮೆಯಿಂದ ಇಂಜಿನ್ ಬಿಡಿಭಾಗಗಳ ಮಧ್ಯದಿಂದ ಅದನ್ನು ಹೊರಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸುರಕ್ಷಿತವಾಗಿ ಹೊರಬಂದಿರುವ ನವಿಲು ಯಾವುದೇ ಗಾಯಗಳಿಲ್ಲದೆ ಆರೋಗ್ಯವಾಗಿದೆ.

ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಕಾರುಣ್ಯಕ್ಕೆ ನೆಟ್ಟಿಗರು ಜೈಕಾರ ಹಾಕುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles