Home ದಾವಣಗೆರೆ ರೈತರಿಗೆ ಸಿಹಿಸುದ್ದಿ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ‘ನಮೂನೆ 16 ಎ’ ಸಂಯೋಜಿತ ಪಹಣಿ ವ್ಯವಸ್ಥೆ ಜಾರಿ: ಡಾ. ಜಿ. ಪರಮೇಶ್ವರ್ ಘೋಷಣೆ
ದಾವಣಗೆರೆನವದೆಹಲಿಬೆಂಗಳೂರು

ರೈತರಿಗೆ ಸಿಹಿಸುದ್ದಿ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ‘ನಮೂನೆ 16 ಎ’ ಸಂಯೋಜಿತ ಪಹಣಿ ವ್ಯವಸ್ಥೆ ಜಾರಿ: ಡಾ. ಜಿ. ಪರಮೇಶ್ವರ್ ಘೋಷಣೆ

Share
ಜಿ. ಪರಮೇಶ್ವರ್
Share

ಬೆಂಗಳೂರು: ರೈತರು ತಮ್ಮ ಭೂಮಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ದೇಶದಲ್ಲೇ ಮೊದಲ ಬಾರಿಗೆ ಅತ್ಯಂತ ಆಧುನಿಕ ಹಾಗೂ ಪಾರದರ್ಶಕವಾದ ‘ನಮೂನೆ 16 ಎ’ ಸಂಯೋಜಿತ ಪಹಣಿ (RTC) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಮಹತ್ವದ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

ಈ ಹೊಸ ವ್ಯವಸ್ಥೆಯು ಭೂ ದಾಖಲೆಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಿದ್ದು, ರೈತರಿಗೆ ಒಂದೇ ದಾಖಲೆಯಲ್ಲಿ ಸಮಗ್ರ ಮಾಹಿತಿ ಲಭ್ಯವಾಗಲಿದೆ. ವಂಚನೆಗಳಿಗೆ ಕಡಿವಾಣ ಹಾಕಿ, ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಒಂದೇ ದಾಖಲೆಯಲ್ಲಿ ಸಮಗ್ರ ಮಾಹಿತಿ: ನೂತನ ಪಹಣಿಯಲ್ಲಿ ಭೂ ಮಾಲೀಕತ್ವದ ವಿವರ, ಮಾಲೀಕರ ಭಾವಚಿತ್ರ (Photo), ಭೂಮಿಯ ವಿಸ್ತೀರ್ಣ, ನಕ್ಷೆ, ಆಕಾರ್ ಬಂದ್ ಮತ್ತು ರೈತರ ‘ಫಾರ್ಮರ್ ಐಡಿ’ ಸೇರಿದಂತೆ ಪ್ರಮುಖ ಮಾಹಿತಿಗಳು ಒಂದೇ ಕಡೆ ಸಿಗಲಿವೆ.

ಭೂ-ಆಧಾರ್ (14 ಅಂಕಿಗಳ ನಂಬರ್): ರಾಜ್ಯದ ಪ್ರತಿ ಆಸ್ತಿಗೆ ಮಾಲೀಕತ್ವದ ವಿವರವುಳ್ಳ 14 ಸಂಖ್ಯೆಗಳ ವಿಶಿಷ್ಟ ‘ಭೂ-ಆಧಾರ್’ ಸಂಖ್ಯೆ ನೀಡಲಾಗುತ್ತದೆ. ಇದರಿಂದ ದಾಖಲೆಗಳ ತಿರುಚುವಿಕೆ ಮತ್ತು ನಕಲಿ ವಂಚನೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.

ಕ್ಯೂಆರ್ ಕೋಡ್ ಮತ್ತು ಜಿಪಿಎಸ್ ತಂತ್ರಜ್ಞಾನ: ಪಹಣಿಯಲ್ಲಿರುವ ಕ್ಯೂಆರ್ ಕೋಡ್ (QR Code) ಬಳಸಿ ಮ್ಯುಟೇಷನ್ (ಖಾತಾ ಬದಲಾವಣೆ), ಇ.ಸಿ. (ಎಂಬರ್ಸೆಸ್ಮೆಂಟ್ ಸರ್ಟಿಫಿಕೇಟ್) ಹಾಗೂ ಇತರೆ ಭೂದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಅಲ್ಲದೆ, ಜಿಪಿಎಸ್ (GPS) ಮೂಲಕ ಭೂಮಿಯ ನಿಖರ ಸ್ಥಳ, ಗಡಿ ಹಾಗೂ ನೀರಾವರಿ ಮಾಹಿತಿಯನ್ನೂ ಪಡೆಯಬಹುದು.

ಯೋಜನೆಯ ಗುರಿ ಮತ್ತು ಪ್ರಗತಿ: ರಾಜ್ಯದಲ್ಲಿರುವ ಒಟ್ಟು ಸುಮಾರು 2.1 ಕೋಟಿ ಪಹಣಿಗಳ ಪೈಕಿ ಈಗಾಗಲೇ 9.59 ಲಕ್ಷ ನಮೂನೆ 16 ‘ಎ’ ಪಹಣಿಗಳು ಸಿದ್ಧಗೊಂಡಿವೆ. ಮತ್ತ 6 ಲಕ್ಷ ಪಹಣಿಗಳ ಪರಿವರ್ತನೆ ಪ್ರಗತಿಯಲ್ಲಿದ್ದು, ಮುಂಬರುವ ಮೂರು ತಿಂಗಳಲ್ಲಿ ಕನಿಷ್ಠ 1 ಕೋಟಿ ಪಹಣಿಗಳನ್ನು ಈ ಹೊಸ ವ್ಯವಸ್ಥೆಯಡಿ ತರಲು ಕಂದಾಯ ಇಲಾಖೆ ಗುರಿ ಹೊಂದಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳೂ ಸಹ ಈ ವಿನೂತನ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದು, ಇಲಾಖೆಯನ್ನು ಸಂಪೂರ್ಣ ಜನಸ್ನೇಹಿಯಾಗಿಸಲು ಬದ್ಧವಿರುವುದಾಗಿ ಸಚಿವರು ತಿಳಿಸಿದ್ದಾರೆ.

Share

Recent Posts

Recent Comments

No comments to show.
Related Articles