ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೋಲಿಸರ ಅತಿಥಿಯಾಗಿದ್ದ ಪವಿತ್ರ ಗೌಡ ನಂತರ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು.
ಆದರೆ ಇದೀಗ ಮತ್ತೆ ಪವಿತ್ರಗೌಡಗೆ ಸಂಕಷ್ಟ ಎದುರಾಗಿದ್ದು ಚಿನ್ನಾಭರಣ ವಂಚಿತ ಆರೋಪಿ ಶ್ವೇತಗೌಡಗೂ ಹಾಗೂ ಪವಿತ್ರಗೌಡಗೂ ಸ್ನೇಹವಿತ್ತು ಎಂಬ ವಿಚಾರ ಹೊರಬಿದ್ದಿದ್ದೆ.
ಪವಿತ್ರ ಸ್ನೇಹಿತೆ ಸಮತಾಗೆ ಶ್ವೇತಾ ಆಪ್ತಗೆಳತಿಯಾಗಿದ್ದಳು, ಈ ಹಿಂದೆ ಪವಿತ್ರ ಗೌಡ ಜೈಲು ಪಾಲದಾಗ ಪವಿತ್ರಾ ಸ್ನೇಹಿತೆ ಸಮತಾ ಜೊತೆ ಶ್ವೇತಾ ಕೂಡ ಜೈಲಿಗೆ ಭೇಟಿಕೊಟ್ಟಿದ್ದ ವೀಡಿಯೋ ಇದೀಗ ವೈರಲ್ ಆಗಿದೆ. ಆದರೀಗ ಶ್ವೇತಾ ಜೊತೆಗಿನ ಸ್ನೇಹವನ್ನು ನಿರಾಕರಿಸಿರುವ ಸಮತಾ ಆಕೆ ನನ್ನ ಸ್ನೇಹಿತೆಯಲ್ಲ ಎಂದು ವಾದಿಸುತ್ತಿದ್ದಾರೆ.