Home ಕ್ರೈಂ ನ್ಯೂಸ್ ಬಾಡಿಗೆ ಮನೆ ನೋಡಲು ಹೋದ ಬ್ಯಾಂಕ್ ಮ್ಯಾನೇಜರ್ ದಂಪತಿ ಮೇಲೆ ಪಿಟ್‌ಬುಲ್ ನಾಯಿ ಡೆಡ್ಲಿ ಅಟ್ಯಾಕ್: ಭಯಾನಕತೆಗೆ ಬೆಚ್ಚಿದ ಗಂಡ ಹೆಂಡತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬಾಡಿಗೆ ಮನೆ ನೋಡಲು ಹೋದ ಬ್ಯಾಂಕ್ ಮ್ಯಾನೇಜರ್ ದಂಪತಿ ಮೇಲೆ ಪಿಟ್‌ಬುಲ್ ನಾಯಿ ಡೆಡ್ಲಿ ಅಟ್ಯಾಕ್: ಭಯಾನಕತೆಗೆ ಬೆಚ್ಚಿದ ಗಂಡ ಹೆಂಡತಿ!

Share
ದಂಪತಿ
Share

ಟಿಯಾಲ: ಬಾಡಿಗೆ ಮನೆ ನೋಡಲು ತೆರಳಿದ್ದ ದಂಪತಿಯ ಮೇಲೆ ಸಾಕಾಗಿದ್ದ ಪಿಟ್‌ಬುಲ್ (Pitbull) ನಾಯಿಯೊಂದು ಭೀಕರವಾಗಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಪಂಜಾಬ್‌ನ ಪಟಿಯಾಲದ ಘುಮ್ಮನ್ ನಗರದಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಖಾಸಗಿ ಬ್ಯಾಂಕ್ ಮ್ಯಾನೇಜರ್ ಅಂಕಿತಾ ಸಭರ್ವಾಲ್ ಹಾಗೂ ಚಂಡೀಗಢ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಅವರ ಪತ್ನಿ ಶಿಫಾಲಿ ಸಭರ್ವಾಲ್ ಪ್ರಾಪರ್ಟಿ ಡೀಲರ್ ಜೊತೆ ಮನೆ ನೋಡಲು ಹೋಗಿದ್ದರು. ಮನೆಯ ಗೇಟ್ ತೆರೆಯುತ್ತಿದ್ದಂತೆಯೇ ಒಳಗಿದ್ದ ಪಿಟ್‌ಬುಲ್ ನಾಯಿ ಏಕಾಏಕಿ ಹೊರಗೆ ಧಾವಿಸಿ ಬಂದು ಶಿಫಾಲಿ ಅವರ ಮೇಲೆ ದಾಳಿ ಮಾಡಿತು. ಪತ್ನಿಯನ್ನು ರಕ್ಷಿಸಲು ತೆರಳಿದ ಅಂಕಿತಾ ಅವರ ಕಾಲಿನ ಭಾಗ ಹಾಗೂ ಬೆನ್ನಿಗೆ ನಾಯಿ ತೀವ್ರವಾಗಿ ಕಡಿದು ಗಾಯಗೊಳಿಸಿದೆ.

ಸ್ಥಳೀಯರು ಹಾಗೂ ಮನೆಯವರು ಕೋಲುಗಳಿಂದ ಹೊಡೆದು ನಾಯಿಯನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ ನಾಯಿ ನಿಯಂತ್ರಣಕ್ಕೆ ಬರಲಿಲ್ಲ. ಕೊನೆಗೆ ಕಷ್ಟಪಟ್ಟು ದಂಪತಿಯನ್ನು ನಾಯಿಯ ಹಿಡಿತದಿಂದ ರಕ್ಷಿಸಲಾಯಿತು. ದಾಳಿಯಲ್ಲಿ ಶಿಫಾಲಿ ಅವರ ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 291ರ ಅಡಿಯಲ್ಲಿ ನಾಯಿಯ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಟಿಯಾಲ ಮೇಯರ್ ಕುಂದನ್ ಗೋಗಿಯಾ, ನಗರದಲ್ಲಿ ಅಪಾಯಕಾರಿ ಮತ್ತು ಕ್ರೂರ ತಳಿಯ ನಾಯಿಗಳ ಸಾಕಣೆಯನ್ನು ನಿಷೇಧಿಸಲು ಪಾಲಿಕೆ ಸಭೆಯಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *