Home ಕ್ರೈಂ ನ್ಯೂಸ್ ಆತ್ಮರಕ್ಷಣೆಗೆ ಗನ್ ಬೇಡ, ಪೆಪ್ಪರ್ ಸ್ಪ್ರೇ ಸಾಕು, ಖುಷ್ಬೂ ಪಟಾನಿ ಏರ್ ಪಿಸ್ತೂಲ್ ಸಲಹೆ ಉಲ್ಟಾ ಹೊಡೆದಿದ್ದೇಕೆ? ಮಿಲಿಟರಿ ತಜ್ಞರು ಹೇಳಿದ್ದೇನು?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಆತ್ಮರಕ್ಷಣೆಗೆ ಗನ್ ಬೇಡ, ಪೆಪ್ಪರ್ ಸ್ಪ್ರೇ ಸಾಕು, ಖುಷ್ಬೂ ಪಟಾನಿ ಏರ್ ಪಿಸ್ತೂಲ್ ಸಲಹೆ ಉಲ್ಟಾ ಹೊಡೆದಿದ್ದೇಕೆ? ಮಿಲಿಟರಿ ತಜ್ಞರು ಹೇಳಿದ್ದೇನು?

Share
ಖುಷ್ಬೂ ಪಟಾನಿ
Share

ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಘಟನೆಗಳ ಬೆನ್ನಲ್ಲೇ, ಮಹಿಳೆಯರು ತಮ್ಮ ಸ್ವಂತ ರಕ್ಷಣೆಗೆ CO2 ಏರ್ ಪಿಸ್ತೂಲ್ ಬಳಸಬೇಕೆಂದು ಕರೆ ನೀಡಿದ್ದ ಭಾರತೀಯ ಸೇನೆಯ ಮಾಜಿ ಮೇಜರ್ ಹಾಗೂ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಅವರ ವೀಡಿಯೊ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಬಿಹಾರದ ಜಮುಯಿ ಮತ್ತು ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ ನಡೆದ ಅಪ್ರಾಪ್ತೆಯರ ಮೇಲಿನ ದೌರ್ಜನ್ಯದ ಘಟನೆಗಳಿಂದ ಕೆರಳಿದ ಖುಷ್ಬೂ ಪಟಾನಿ, “ಮಹಿಳೆಯರು ತಮ್ಮ ರಕ್ಷಣೆಗೆ ಕಾನೂನು ವ್ಯವಸ್ಥೆ ಅಥವಾ ಗಂಡಸರ ಮೇಲೆ ಅವಲಂಬಿತರಾಗದೆ ತಮ್ಮ ಬಳಿ .177 ಕ್ಯಾಲಿಬರ್‌ನ CO2 ಏರ್ ಪಿಸ್ತೂಲ್ ಇಟ್ಟುಕೊಳ್ಳಬೇಕು ಹಾಗೂ ಶೂಟಿಂಗ್ ರೇಂಜ್‌ನಲ್ಲಿ ತರಬೇತಿ ಪಡೆಯಬೇಕು” ಎಂದು ಸಲಹೆ ನೀಡಿದ್ದರು.

ತಜ್ಞರು ಮತ್ತು ಯೋಧರ ವಿರೋಧಕ್ಕೆ ಕಾರಣವೇನು?

ಖುಷ್ಬೂ ಅವರ ಉದ್ದೇಶ ಒಳ್ಳೆಯದಾಗಿದ್ದರೂ, ಅವರ ಈ ಸಲಹೆಯನ್ನು ರಕ್ಷಣಾ ತಜ್ಞರು ಮತ್ತು ಮಾಜಿ ಸೇನಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ:

ಟ್ರಿಗರ್ ಡಿಸಿಪ್ಲಿನ್ ಕೊರತೆ: ವೀಡಿಯೊದಲ್ಲಿ ಗನ್ ಹಿಡಿದುಕೊಳ್ಳುವಾಗ ಮೂಲಭೂತ ಭದ್ರತಾ ನಿಯಮಗಳನ್ನು  ಪಾಲಿಸಿಲ್ಲ ಎಂದು ವಿಂಗ್ ಕಮಾಂಡರ್ ಪುಷ್ಕಲ್ ವಿಜಯ್ ದ್ವಿವೇದಿ (ನಿವೃತ್ತ) ಹಾಗೂ ಹಿರಿಯ ಪತ್ರಕರ್ತ ಸಂದೀಪ್ ಉನ್ನಿಥನ್ ಬೆಟ್ಟು ಮಾಡಿದ್ದಾರೆ.

ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ: .177 CO2 ಏರ್ ಗನ್‌ಗಳು ಪೆಲೆಟ್ ಅಥವಾ BB ಗಳನ್ನು ಹಾರಿಸುತ್ತವೆ. ಇವು ನೋವನ್ನು ಉಂಟುಮಾಡಬಹುದೇ ವಿನಃ ದಾಳಿಕೋರನನ್ನು ಸಂಪೂರ್ಣವಾಗಿ ತಡೆಯಲು (Incapacitate) ಸಾಧ್ಯವಿಲ್ಲ. ಉದ್ವೇಗದಲ್ಲಿದ್ದ ದಾಳಿಕೋರನ ವಿರುದ್ಧ ಇದನ್ನು ಬಳಸಿದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು.

ಪೆಪ್ಪರ್ ಸ್ಪ್ರೇ ಸುರಕ್ಷಿತ: ಮಿಲಿಟರಿ ತಜ್ಞರಾದ ಮೇಜರ್ ಮಣಿಕ್ ಎಂ ಜೋಲಿ (ನಿವೃತ್ತ) ಅವರ ಪ್ರಕಾರ, ಸರಿಯಾದ ತರಬೇತಿ ಇಲ್ಲದೆ ಪಿಸ್ತೂಲ್ ಮಾದರಿಯ ಆಯುಧ ಹಿಡಿಯುವುದಕ್ಕಿಂತ ಪೆಪ್ಪರ್ ಸ್ಪ್ರೇ  ಬಳಸುವುದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ.

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿದ್ದು, ಆಯುಧಗಳನ್ನು ಪ್ರಚೋದಿಸುವುದಕ್ಕಿಂತ ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಭದ್ರತೆ ಹಾಗೂ ಸೂಕ್ತ ಕಾನೂನು ಕ್ರಮ ಜಾರಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *