ಜಮ್ಮು: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾರಿ ಯಶಸ್ಸು ಸಾಧಿಸಿದೆ. ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಈ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಎಂದು ಹೆಸರಿಸಿ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿಯನ್ನು (Supplementary Chargesheet) ಸಲ್ಲಿಕೆ ಮಾಡಲಾಗಿದೆ.
ಪಾಕಿಸ್ತಾನದಿಂದಲೇ ಸಂಚು ರೂಪಿಸಿದ್ದ ಹಫೀಜ್ ಸಯೀದ್:
ಕಳೆದ 2025ರ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ಗೈಡ್ ಸೇರಿದಂತೆ ಒಟ್ಟು 26 ಅಮಾಯಕರು ಸಾವನ್ನಪ್ಪಿದ್ದರು. ಎನ್‌ಐಎ ತನಿಖೆಯ ಪ್ರಕಾರ, ಈ ಇಡೀ ದಾಳಿಯ ಸಂಚನ್ನು ಪಾಕಿಸ್ತಾನದಿಂದಲೇ ರೂಪಿಸಲಾಗಿತ್ತು. ಹಫೀಜ್ ಸಯೀದ್ ಸ್ವತಃ ಉಗ್ರರಿಗೆ ಸೂಚನೆಗಳನ್ನು ನೀಡುತ್ತಾ, ದಾಳಿಯ ಇಂಚಿಂಚೂ ಯೋಜನೆಯನ್ನು ಪಾಕಿಸ್ತಾನದಲ್ಲಿ ಕುಳಿತು ಮೇಲ್ವಿಚಾರಣೆ ನಡೆಸಿದ್ದ ಎಂಬ ಸ್ಫೋಟಕ ಸತ್ಯ ತನಿಖೆಯಿಂದ ಬಹಿರಂಗವಾಗಿದೆ.
ಉಗ್ರ ಕಾಯ್ದೆಯಡಿ ಪ್ರಕರಣ ದಾಖಲು:
ಹಫೀಜ್ ಸಯೀದ್ ವಿರುದ್ಧ ಭಾರತದ ವಿರುದ್ಧ ಯುದ್ಧ ಸಾರಿದ ಆರೋಪ ಹಾಗೂ ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (BNS), 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), 1967 ರ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಷ್ಕರ್‌ನ ಮುಖವಾಡವಾಗಿ ಕೆಲಸ ಮಾಡುತ್ತಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಸಂಘಟನೆಯ ಮೂಲಕ ಈ ಕೃತ್ಯ ಎಸಗಲಾಗಿದೆ ಎಂದು ಎನ್‌ಐಎ ಉಲ್ಲೇಖಿಸಿದೆ.
ದಾಳಿ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾದ ಸೈಂಟಿಫಿಕ್, ಫೋರೆನ್ಸಿಕ್ ಮತ್ತು ಡಿಜಿಟಲ್ ಪುರಾವೆಗಳನ್ನು ಈ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಲಾಗಿದೆ. ಈ ಹಿಂದೆ 2025ರ ಡಿಸೆಂಬರ್‌ನಲ್ಲಿ ಸಲ್ಲಿಕೆಯಾಗಿದ್ದ 1,597 ಪುಟಗಳ ಮೊದಲ ದೋಷಾರೋಪ ಪಟ್ಟಿಯ ವಿಸ್ತರಣೆಯಾಗಿ ಈ ಪೂರಕ ದಾಖಲೆಯನ್ನು ಸಲ್ಲಿಕೆ ಮಾಡಲಾಗಿದ್ದು, ಪಾಕಿಸ್ತಾನದ ಉಗ್ರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- cross border terrorism Pakistan
- Hafiz Saeed LeT
- Jammu special court
- Kashmir tourist attack 2025
- NIA supplementary chargesheet
- Operation Mahadev
- Pahalgam terror attack
- Sajid Jatt
- The Resistance Front TRF
- UAPA BNS charges
- ಎನ್ಐಎ ದೋಷಾರೋಪ ಪಟ್ಟಿ
- ಕಾಶ್ಮೀರ ಪ್ರವಾಸಿಗರ ಮೇಲಿನ ದಾಳಿ
- ಕಾಶ್ಮೀರ ಪ್ರವಾಸೋದ್ಯಮ ಉಗ್ರರ ದಾಳಿ
- ಜಮ್ಮು ವಿಶೇಷ ನ್ಯಾಯಾಲಯ
- ದಿ ರೆಸಿಸ್ಟೆನ್ಸ್ ಫ್ರಂಟ್
- ಪಹಲ್ಗಾಮ್ ಉಗ್ರರ ದಾಳಿ
- ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ
- ಯುಎಪಿಎ ಕಾಯ್ದೆ
- ಹಫೀಜ್ ಸಯೀದ್ ಲಷ್ಕರ್





Leave a comment