
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ವೈವಾಹಿಕ ಕಲಹವು ಉಲ್ಬಣಗೊಂಡಿದ್ದು, ವಕುಲ್ ವಿಜಯವರ್ಗೀಯ ಎಂಬವರು ತಮ್ಮ ಪತ್ನಿ ಯಶಸ್ವಿ ವಿಜಯವರ್ಗೀಯ ಮತ್ತು ಮಾವ ಸಂಜಯ್ ವಿರುದ್ಧ ಸುಲಿಗೆ, ಬ್ಲ್ಯಾಕ್‌ಮೇಲ್ ಹಾಗೂ ನಕಲಿ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಹಾಗೂ ಮಹಿಳಾ ಸ್ನೇಹಿತೆಯೊಬ್ಬರ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ.
2023ರಲ್ಲಿ ವಿವಾಹವಾಗಿದ್ದ ವಕುಲ್ ಹಾಗೂ ಯಶಸ್ವಿ ನಡುವೆ ಮದುವೆಯಾದ ಕೇವಲ ಎರಡು ತಿಂಗಳಲ್ಲಿಯೇ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಯಶಸ್ವಿ ತವರು ಮನೆಗೆ ತೆರಳಿದ್ದರು. ಮದುವೆ ಸಂದರ್ಭದಲ್ಲಿ 10 ಲಕ್ಷ ರೂ., ಐಫೋನ್ ಹಾಗೂ ವಿದೇಶಿ ಪ್ರವಾಸಕ್ಕಾಗಿ ಬೇಡಿಕೆ ಇಟ್ಟಿದ್ದಾಗಿ ವಕುಲ್ ಆರೋಪಿಸಿದ್ದು, ಪೊಲೀಸರಿಗೆ ಪ್ರಿ-ಮ್ಯಾರಿಟಲ್ ಚಾಟ್‌ಗಳನ್ನು ಒದಗಿಸಿದ್ದಾರೆ.
ಈ ಹಿಂದೆ ಪತ್ನಿ ಯಶಸ್ವಿ ವಕುಲ್ ವಿರುದ್ಧ ವರದಕ್ಷತೆ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಇದೀಗ ಪತಿ ವಕುಲ್ ನೀಡಿದ ಪ್ರತಿದೂರಿನ ಮೇರೆಗೆ ಪೊಲೀಸರು ಪತ್ನಿ ಮತ್ತು ಮಾವನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಫೋಟೋ ಎಡಿಟಿಂಗ್ ಹಾಗೂ ಬ್ಲ್ಯಾಕ್‌ಮೇಲ್: ಪತಿಯು ಮಹಿಳಾ ಸ್ನೇಹಿತೆಯೊಂದಿಗೆ ಇರುವ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿ, ಸುಳ್ಳು ಕೇಸು ಹಾಕುವುದಾಗಿ ಬೆದರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಆರೋಪ.
ಕೌಟುಂಬಿಕ ಕಲಹದ ಹಿನ್ನೆಲೆ: 2023ರಲ್ಲಿ ಮದುವೆಯಾಗಿದ್ದ ದಂಪತಿ ನಡುವೆ ಕೇವಲ ಎರಡು ತಿಂಗಳಲ್ಲೇ ಬಿರುಕು ಮೂಡಿದ್ದು, ವರದಕ್ಷಿಣೆ ಹಾಗೂ ಐಫೋನ್ ವಿಚಾರವಾಗಿ ಗಲಾಟೆ ನಡೆದಿದೆ.
ಪೊಲೀಸ್ ತನಿಖೆ: ಪತ್ನಿ ಈ ಹಿಂದೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರೆ, ಇದೀಗ ಪತಿ ನೀಡಿದ ಪ್ರತಿ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಹಿಳೆಯರಿಗೆ ಕಾನೂನು ನೀಡಿರುವ ಹಕ್ಕುಗಳನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಮುಗ್ಧರನ್ನು ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವಕುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




