SUDDIKSHANA KANNADA NEWS/ DAVANAGERE/ DATE:08-11-2023
ದಾವಣಗೆರೆ: ಮಹಿಳೆಯೊಬ್ಬರಿಗೆ ಆನ್ ಲೈನ್ ನಲ್ಲಿ 3.5 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಹೊನ್ನಾಳಿ- ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿಯ ಟಿ. ಎನ್. ನಯನಾ ವಂಚನೆಗೊಳಗಾದವರು. ಬೆಂಗಳೂರಿನಲ್ಲಿ ನೆಲೆಸಿರುವ ಟಿ. ಗೋಪಗೊಂಡನಹಳ್ಳಿ ಗ್ರಾಮದ ನಯನಾ ಅವರಿಗೆ ವಾಟ್ಸಪ್ ನಲ್ಲಿ ಸಂದೇಶ ಬಂದಿತ್ತು. ವಂಚಕರು ಕಳುಹಿಸಿದ್ದ ಈ ಮೆಸೇಜ್ ನಲ್ಲಿ ದಿನಕ್ಕೆ 3 ಸಾವಿರದಿಂದ 5 ಸಾವಿರ ರೂಪಾಯಿಯನ್ನು ಗಳಿಸಬಹುದು ಎಂದು ನಂಬಿಸಿದ್ದರು. ಟೆಲಿಗ್ರಾಂ ಆ್ಯಪ್ ನಲ್ಲಿ ಜಾಬ್ ಲಿಂಕ್ ಕಳುಹಿಸಿ, ಕೆಲವು ಟಾಸ್ಕ್ ಪೂರ್ಣಗೊಳಿಸಿದರೆ ಕಮೀಷನ್ ಬರುತ್ತದೆ ಎಂದು ನಂಬಿಸಿದ್ದರು.
ಅದರಂತೆ ಕೆಲ ಟಾಸ್ಕ್ ಪೂರೈಸಿದ ಬಳಿಕ ಕಮೀಷನ್ ಬಂದಿದೆ ಎಂದು ತೋರಿಸಿದ್ದರು. ಬಳಿಕ ಕೆಲವು ಟಾಸ್ಕ್ ಗಳನ್ನು ನೀಡಿ ಕಮೀಷನ್ ಬರುತ್ತಿದೆ ಎಂದು ನಂಬಿಸುತ್ತಾ ಹೋದರು. ಕೊನೆಗೆ ಕಮೀಷನ್ ಹಣ ಪಡೆಯಬೇಕಾದರೆ ಹಣ ಪಾವತಿಸಬೇಕು
ಎಂದು ಸೂಚನೆ ನೀಡಿದಗರು. ಅದರಂತೆ ನಂಬಿದ ನಯನಾ ಅವರು ಹಂತ ಹಂತವಾಗಿ ಹಣ ಕಳುಹಿಸುತ್ತಲೇ ಹೋದರು. ಅನುಮಾನ ಬಂದ ಬಳಿಕ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.