SUDDIKSHANA KANNADA NEWS/ DAVANAGERE/ DATE:05-11-2023
ಬೆಂಗಳೂರು: ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇಲಾಖೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದ ಪ್ರತಿಮಾ ಕೊಲೆಗೀಡಾದ ಅಧಿಕಾರಿ. ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹತ್ಯೆ ನಡೆದಿದೆದ. ಬೆಂಗಳೂರಿನ ಸರ್ಕಾರಿ ಅಧಿಕಾರಿಯ ಬರ್ಬರ ಕೊಲೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಚಾಕುವಿನಿಂದ ಇರಿದು ಕೊಂದ ಬಳಿಕ ಹಂತಕರು ಪರಾರಿಯಾಗಿದ್ದಾರೆ. ಮನೆಯಲ್ಲಿ ಪ್ರತಿಮಾ ಅವರು ಒಬ್ಬರೇ ಇದ್ದ ವೇಳೆ ಹತ್ಯೆ ಮಾಡಲಾಗಿದೆ. ಮನೆಯ ಒಳಗಿ ನುಗ್ಗಿದ ಹಂತಕರು ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡೆಪ್ಯುಟಿ ಡೈರಕ್ಟರ್ ಆಗಿದ್ದ ಪ್ರತಿಮಾ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಪ್ರತಿಮಾ ಅವರುತೆಗೆದಿದ್ದಾರೆ. ಈ ವೇಳೆ ಒಳ ನುಗ್ಗಿದ ಹಂತಕರು ಚಾಕುವಿನಿಂದ ಇರಿದಿದ್ದಾರೆ. ಆದ್ರೆ, ಈ ಹತ್ಯೆ ಯಾವ ಕಾರಣಕ್ಕೆ ಆಗಿರಬಹುದು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಆಗಿದೆಯೋ ಅಥವಾ ಬೇರೆ ವಿಚಾರಕ್ಕೆ ಮರ್ಡರ್ ಆಗಿದೆಯೋ ಎಂಬ ಬಗ್ಗೆ ತನಿಖೆಯಿಂದ ಸತ್ಯ ಹೊರಬರಬೇಕಿದೆ.
ಪತಿಯಿಂದ ವಿಚ್ಚೇದನ ಪಡೆದು ಒಂಟಿಯಾಗಿ ಪ್ರತಿಮಾ ವಾಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಕ್ಕಾಗಿ ಏನಾದರೂ ಕೊಲೆ ನಡೆದಿರಬಹುದಾ ಎಂಬ ಆಯಾಮದಲ್ಲಿಯೂ ತನಿಖೆ ಮುಂದುವರಿಸಲಾಗಿದೆ.