• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, June 20, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಏಪ್ರಿಲ್ 12ರಿಂದ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ ಆರಂಭ: ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿದ ಡಿಸಿ ಕೊಟ್ಟ ಸೂಚನೆ ಏನು…?

Editor by Editor
March 23, 2024
in ದಾವಣಗೆರೆ
0
ಏಪ್ರಿಲ್ 12ರಿಂದ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ ಆರಂಭ: ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿದ ಡಿಸಿ ಕೊಟ್ಟ ಸೂಚನೆ ಏನು…?

SUDDIKSHANA KANNADA NEWS/ DAVANAGERE/ DATE:23-03-2024

ದಾವಣಗೆರೆ: 18 ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಏಪ್ರಿಲ್ 12 ರಿಂದ ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಲು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇಳಾಪಟ್ಟಿಯಂತೆ ಮಾದತಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭ, ಶಂಕುಸ್ಥಾಪನೆ, ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ. ಮತ್ತು ರಾಜಕೀಯ ಪಕ್ಷಗಳು ಸಭೆ, ರ್ಯಾಲಿಗಳನ್ನು ಆಯೋಜಿಸಲು, ಪೋಸ್ಟರ್, ಬ್ಯಾನರ್ ಅಳವಡಿಸಲು ಅಯಾ ಸಮಾರಂಭದ ಅವಧಿಗೆ ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. ಮತ್ತು ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವುದು ನಿಷಿದ್ದವಾಗಿರುತ್ತದೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು ಇಲ್ಲಿಯವರೆಗೆ 16,79,746 ಮತದಾರರಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು ನಾಮಪತ್ರ ಸಲ್ಲಿಕೆ ಕೊನೆಯ ದಿನದ ಹಿಂದಿನ 10 ದಿನಗಳವರೆಗೆ ತಿದ್ದುಪಡಿ, ಸೇರ್ಪಡೆಗೆ ಅವಕಾಶ ಇರುತ್ತದೆ. ಏಪ್ರಿಲ್ 1 ಕ್ಕೆ 18 ವರ್ಷ ತುಂಬುವವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೊಸದಾಗಿ ನೊಂದಾಯಿಸಲಾಗಿದೆ, ನಾಮಪತ್ರ ಸಲ್ಲಿಕೆಯು ಏಪ್ರಿಲ್ 12 ರಿಂದ 19, ಏ.20 ಪರಿಶೀಲನೆ, ಏ.22 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು ಮೇ. 7 ರಂದು ಮತದಾನ ಮತ್ತು ಎಣಿಕೆಯು ಜೂನ್ 4 ರಂದು ನಡೆಯಲಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು.

ಮೊದಲ ರ್ಯಾಂಡಮೈಜೇಷನ್:

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡುತ್ತಿದ್ದು ಕ್ಷೇತ್ರದಲ್ಲಿ ಎಂ.3 ಮೇಕ್ 2023 ಮಾದರಿಯ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಇವುಗಳಿಗೆ ಇವಿಎಂ ಟ್ರ್ಯಾಕಿಂಗ್ ಸಾಫ್ಟ್ ವೇರ್ ಅಳವಡಿಸಲು ಮೊದಲ ರ್ಯಾಂಡೋಮೈಜೇಷನ್ ಮಾರ್ಚ್ 22 ರಂದು ನಡೆಸಲಾಗುತ್ತಿದೆ. ಬೆಮೆಲ್ ಕಂಪನಿಯ 2826 ಬ್ಯಾಲೆಟ್ ಯುನಿಟ್, 2339 ಕಂಟ್ರೋಲ್ ಯುನಿಟ್, 2534 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿ ಮೊದಲ ರ್ಯಾಂಡೋಮೈಜೇಷನ್ ನಡೆಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Next Post
ಗಜಕೇಸರಿ ಯೋಗದ ಬಗ್ಗೆ ತಿಳಿದುಕೊಳ್ಳಬೇಕಾ… ಹಾಗಿದ್ರೆ ಇಲ್ನೋಡಿ

ಗಜಕೇಸರಿ ಯೋಗದ ಬಗ್ಗೆ ತಿಳಿದುಕೊಳ್ಳಬೇಕಾ... ಹಾಗಿದ್ರೆ ಇಲ್ನೋಡಿ

Leave a Reply Cancel reply

Your email address will not be published. Required fields are marked *

Recent Posts

  • ಹಣ ಕೊಟ್ಟವರಿಗೆ ಮನೆ: ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಗೆ ನಾವು ಬೆಂಬಲ ಕೊಡ್ತೇವೆಂದ ಆರ್. ಅಶೋಕ್!
  • ನಿವೇಶನದ ಹಕ್ಕುಪತ್ರ ನೀಡಲು ಲಂಚ ಪಡೆಯುವಾಗ ಬಿಲ್ ಕಲೆಕ್ಟರ್, ನೀರುಗಂಟಿ ಲೋಕಾಯುಕ್ತ ಬಲೆಗೆ!
  • “ರಾಜ್ಯ ಸರ್ಕಾರದಲ್ಲಿ ದುಡ್ಡು ಕೊಟ್ಟವರಿಗಷ್ಟೇ ವಸತಿ ಯೋಜನೆಯಡಿ ಮನೆ ಹಂಚಿಕೆ”: ಕಾಂಗ್ರೆಸ್ ಶಾಸಕನ ಗಂಭೀರ ಆರೋಪ!
  • ಭದ್ರಾ ಡ್ಯಾಂ ನೀರಿನ ಮಟ್ಟ 150 ಅಡಿಗೆ ಏರಿಕೆ: ಒಳಹರಿವಿನಲ್ಲಿ ಸ್ವಲ್ಪ ಕುಸಿತ, ಭರ್ತಿಗೆ ಬೇಕು 36 ಅಡಿ
  • ಈ ರಾಶಿಯವರ ವ್ಯಾಪಾರ ವಹಿವಾಟಗಳಲ್ಲಿ ಕ್ರಮೇಣ ಉನ್ನತಿ ಭಾಗ್ಯ, ಈ ರಾಶಿಯವರ ಪ್ರೇಮಿಗಳ ಮದುವೆಗೆ ವಿರೋಧ

Recent Comments

No comments to show.

Archives

  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In