SUDDIKSHANA KANNADA NEWS/ DAVANAGERE/ DATE:23-03-2025
ದಾವಣಗೆರೆ: ಕೊನೆ ಭಾಗದ ಗ್ರಾಮಗಳಿಗೆ ಚಾನೆಲ್ ನೀರು ಹರಿದು ಬಾರದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದಾವಣಗೆರೆ ತಾಲೂಕು ಕೋಡಿಹಳ್ಳಿ ಗ್ರಾಮ ಹಾಗೂ ಹರಿಹರ ತಾಲೂಕು ಗಂಗನರಸಿ, ಗುತ್ತೂರು, ಅಮರಾವತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಚಾನಲ್ ನೀರು ಹರಿಸಲಾಗಿದ್ದರೂ ಕೂಡ ಇದುವರೆಗೂ ಕೊನೇ ಭಾಗದ ಗ್ರಾಮಗಳಿಗೆ ನೀರು ಬಂದಿಲ್ಲ. ಹಾಗಾಗಿ, ರೈತರು ಮಾರ್ಚ್ 24ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕೋಡಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಾ. 24 ಮಧ್ಯಾಹ್ನ 12 ಗಂಟೆಗೆ ಮಲೇಬೆನ್ನೂರು ಗ್ರಾಮದ ನೀರಾವರಿ ಇಲಾಖೆಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ತಿಳಿಸಿದ್ದಾರೆ.