SUDDIKSHANA KANNADA NEWS/ DAVANAGERE/ DATE:11-01-2024
ದಾವಣಗೆರೆ: ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರಿಂದ ಜ. 12ರಂದು ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಘಟಕ-02 ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳು ಇರುವುದರಿಂದ ಜ.12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅವರಗೆರೆ, ಬಾಡ ಕ್ರಾಸ್, ಆಂಜನೇಯ ಕಾಟನ್ ಮಿಲ್, ಎಚ್. ಕಲಪನಹಳ್ಳಿ, ಹೊನ್ನೂರು, ಹೊನ್ನೂರು ಗೊಲ್ಲರಹಟ್ಟಿ, ಮಲ್ಲಶೆಟ್ಟಿಹಳ್ಳಿ, ಕರಿಲಕ್ಕೆನಹಳ್ಳಿ, ಚಟ್ಟೋಬನಹಳ್ಳಿ ಐಸಾಪುರ, ಹೊಸಚಿಕ್ಕನಹಳ್ಳಿ ವಡ್ಡಿನಹಳ್ಳಿ, ಐಗೂರು, ಐಗೂರು ಗೊಲ್ಲರಹಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.