Home ದಾವಣಗೆರೆ ಜಗಳೂರು ವ್ಯಾಪ್ತಿಯಲ್ಲಿ ನಾಳೆ (ಜೂನ್ 5) ವಿದ್ಯುತ್ ವ್ಯತ್ಯಯ: ಬೆಸ್ಕಾಂ ಮಾಹಿತಿ
ದಾವಣಗೆರೆಬೆಂಗಳೂರು

ಜಗಳೂರು ವ್ಯಾಪ್ತಿಯಲ್ಲಿ ನಾಳೆ (ಜೂನ್ 5) ವಿದ್ಯುತ್ ವ್ಯತ್ಯಯ: ಬೆಸ್ಕಾಂ ಮಾಹಿತಿ

Share
ಜಗಳೂರು
Share

ದಾವಣಗೆರೆ: ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 05 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಕೆವಿ ಬಿಳಿಚೋಡು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದ ಮಾರ್ಗಗಳಲ್ಲಿ ಮುಚ್ಚುನೂರು ಎನ್‌ಜೆವೈ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಇರುವುದಿಲ್ಲ. ಇನ್ನುಳಿದಂತೆ ಎಫ್-01 ಗುತ್ತಿದುರ್ಗ, ಎಫ್-02 ಹಾಲೇಕಲ್ಲು, ಎಫ್-05 ಚಿಕ್ಕರಕೆರೆ, ಎಫ್-09 ಮೆದಕೆರನಹಳ್ಳಿ ಮತ್ತು ಎಫ್-10 ಎನ್.ಆರ್.ಪುರ 11ಕೆವಿ ಕೃಷಿ ಮಾರ್ಗಗಳಿಗೆ ಬೆಳಗ್ಗೆ 10:00 ಗಂಟೆಯ ಒಳಗಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *