SUDDIKSHANA KANNADA NEWS/ DAVANAGERE/ DATE:20-02-2024
ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವಎಫ್-12 ಬಸವೇಶ್ವರ, ಎಫ್-2 ಎಂ.ಸಿ.ಸಿ.ಬಿ, ಎಫ್-21 ಸಾಯಿ, ಎಫ್-16 ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯಲ್ಲಿ ಪಾಲಿಕೆ ವತಿಯಿಂದ
ವಾರ್ಡ್ ನಂಬರ್-38 ರ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದ ಹತ್ತಿರ ಬೀದಿ ಬದಿ ಮಾರುಕಟ್ಟೆ ಅಭಿವೃದ್ದಿ ಕಾಮಗಾರಿಯನ್ನು ನಿರ್ವಹಣೆ ಮತ್ತು ತುರ್ತುಕಾರ್ಯದ ನಿಮಿತ್ತ ಫೆ.21 ರಂದು ಬೆಳಿಗ್ಗೆ 10 ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿನಗರ, ಕುಂದುವಾಡರಸ್ತೆ, ಬಸವೇಶ್ವರ ಬಡಾವಣೆ, , ಬಾಪೂಜಿ ಎಂಬಿಎ ಕಾಲೇಜ್, ಅಥಣಿ ಕಾಲೇಜ್, ಕುಂದುವಾಡಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಎಂ.ಸಿ.ಸಿ.ಬಿ ಎಫ್.2 ಫೀಡರ್ ವ್ಯಾಪ್ತಿಯ ಶಾಮನೂರು ರಸ್ತೆ, ಎಸ್. ಎಸ್ ಲೇಔಟ್ .ಎ ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಎಂ.ಸಿ.ಸಿ ಬಿ. ಬ್ಲಾಕ್, ಬಿ.ಐ.ಇ.ಟಿ ರಸ್ತೆ, ಗ್ಲಾಸ್ ಹೌಸ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
ಎಸ್. ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ ಎ & ಬಿ ಬ್ಲಾಕ್ ,ರಿಂಗ್ ರೋಡ್, ಕುಂದವಾಡ ರಸ್ತೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಎಫ್-21 ಸಾಯಿಫೀಡರ್ ವ್ಯಾಪ್ತಿಯ ಶಾಮನೂರು ರಸ್ತೆ, ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ಮತ್ತು ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.