Home ದಾವಣಗೆರೆ ಶುರುವಾಯ್ತು ದಾವಣಗೆರೆಯಿಂದ ಮಂತ್ರಾಲಯಕ್ಕೆ ನೂತನ ಎಸಿ ಸಾರಿಗೆ ಬಸ್: ಪ್ರತಿ ಪ್ರಯಾಣಿಕಗೆ ರೂ. 600 ನಿಗದಿ
ದಾವಣಗೆರೆಬೆಂಗಳೂರು

ಶುರುವಾಯ್ತು ದಾವಣಗೆರೆಯಿಂದ ಮಂತ್ರಾಲಯಕ್ಕೆ ನೂತನ ಎಸಿ ಸಾರಿಗೆ ಬಸ್: ಪ್ರತಿ ಪ್ರಯಾಣಿಕಗೆ ರೂ. 600 ನಿಗದಿ

Share
ದಾವಣಗೆರೆ
Share

ದಾವಣಗೆರೆ: ಇಂದಿನಿಂದ ದಾವಣಗೆರೆ ಕೆ.ಎಸ್.ಆರ್.ಟಿಯಿಂದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಮಂತ್ರಾಲಯ ಮಾರ್ಗವಾಗಿ ಹವಾನಿಯಂತ್ರಿತ ವೋಲ್ವೋ ನೂತನ ಬಸ್ ಸೇವೆಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

READ ALSO THIS STORY: ದಾವಣಗೆರೆ ಡಿಸಿ ಆಗಿದ್ದ ಮಹಾಂತೇಶ್ ಬೀಳಗಿ, ಸಹೋದರ ಶಂಕರ ಬೀಳಗಿ ಸೇರಿ ಮೂವರ ಸಾವು: ಐಎಎಸ್ ಅಧಿಕಾರಿ ಕುರಿತ ಡೀಟೈಲ್ಸ್

ದಾವಣಗೆರೆ

ಅವರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನೂತನ ಹವಾನಿಯಂತ್ರಿತ ವೋಲ್ವೋ ಬಸ್ ಸೇವೆಗೆ ಚಾಲನೆ ನೀಡಿದರು.

ಮಾರ್ಗದ ವಿವರ:

ದಾವಣಗೆರೆ ಕೆ.ಎಸ್.ಆರ್.ಟಿ.ಸಿ ನಿಲ್ದಾಣದಿಂದ ರಾತ್ರಿ 9 ಕ್ಕೆ ಹೊರಟು ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ ಮಾರ್ಗವಾಗಿ ಬೆಳಗಿನ ಜಾವ 4 ಗಂಟೆಗೆ ಗಮ್ಯಸ್ಥಳ ಮಂತ್ರಾಲಯ ತಲುಪಲಿದೆ. ಈ ಮಾರ್ಗವೂ 325 ಕಿ.ಮೀ ಪ್ರಯಾಣ ದೂರವಿದ್ದು, ಪುನಃ ಮಂತ್ರಾಲಯದಿಂದ ಬೆಳಗ್ಗೆ 11 ಕ್ಕೆ ಹೊರಟು ಅದೇ ಮಾರ್ಗವಾಗಿ ಸಂಜೆ 6 ಕ್ಕೆ ದಾವಣಗೆರೆ ಬಸ್ ನಿಲ್ದಾಣ ತಲುಪಲಿದೆ.

ದಾವಣಗೆರೆಯಿಂದ ಮಂತ್ರಾಲಯಕ್ಕೆ ರೂ.600 ಚಿತ್ರದುರ್ಗದಿಂದ ರೂ.547, ಚಳ್ಳಕೆರೆಯಿಂದ ರೂ.515, ಬಳ್ಳಾರಿಯಿಂದ ರೂ.296 ಪ್ರಯಾಣ ದರ ನಿಗದಿಪಡಿಸಲಾಗಿದೆ ಈ ಬಸ್ ಸೇವೆಯು ಪ್ರತಿನಿತ್ಯ ದೊರೆಯಲಿದೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ಈ ವೇಳೆ ವಿಭಾಗೀಯ ನಿಯಂತ್ರಧಿಕಾರಿ ಬಿ.ಎಸ್.ಶಿವಕುಮಾರಯ್ಯ, ಮಾರ್ಗ ನಿಯಂತ್ರಣಾಧಿಕಾರಿ ಫಕ್ರುದ್ದೀನ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *