Home ದಾವಣಗೆರೆ ‘ನಾವು ಎಂದಾದರೂ ಒಂದು ದಿನ ಹೋಗ್ಲೇಬೇಕು, ನಾಳೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನಾ ಪಟೇಕರ್ ಭಾವುಕ ನುಡಿ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ನಾವು ಎಂದಾದರೂ ಒಂದು ದಿನ ಹೋಗ್ಲೇಬೇಕು, ನಾಳೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನಾ ಪಟೇಕರ್ ಭಾವುಕ ನುಡಿ!

Share
ನಾನಾ ಪಟೇಕರ್
Share

ಗೋವಾ: ಖ್ಯಾತ ಬಹುಭಾಷಾ ಹಿರಿಯ ನಟ ಹಾಗೂ ಪದ್ಮಶ್ರೀ ಪುರಸ್ಕೃತ ವಿಶ್ವನಾಥ್ ‘ನಾನಾ’ ಪಟೇಕರ್ (75) ಅವರು ತೀವ್ರ ಹೃದಯಾಘಾತದಿಂದ ಗೋವಾದಲ್ಲಿ ಗುರುವಾರ ಬೆಳಿಗ್ಗೆ 5:20ಕ್ಕೆ ವಿಧಿವಶರಾಗಿದ್ದಾರೆ. ನಿಧನಕ್ಕೂ ನಾಲ್ಕು ದಿನಗಳ ಮುನ್ನ ಗೋವಾದ ದೊನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, “ನಾವು ಎಂದಾದರೂ ಒಂದು ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ” ಎಂದು ಆಡಿದ ಮಾತುಗಳು ಈಗ ಅಭಿಮಾನಿಗಳನ್ನು ಭಾವುಕರನ್ನಾಗಿಸಿವೆ.

ಅಕ್ಟೋಬರ್ 4ರಂದು ದೊನಾ ಪೌಲಾದ ತಾಜ್ ಸಿದಾದೆ ದೆ ಗೋವಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ನಾನಾ ಪಾಟೇಕರ್ ಭಾಗವಹಿಸಿದ್ದರು. ಈ ವೇಳೆ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಕಾರ್ಯವೈಖರಿಯನ್ನು ಸ್ಮರಿಸಿದ ಅವರು, ಜೀವನದ ನಶ್ವರತೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದರು. ಗುರುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, 45 ನಿಮಿಷಗಳ ನಿರಂತರ ಸಿಪಿಆರ್ ಪ್ರಯತ್ನದ ಹೊರತಾಗಿಯೂ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದರು.

ಕೊನೆಯ ಸಾರ್ವಜನಿಕ ಕಾರ್ಯಕ್ರಮ: ಅಕ್ಟೋಬರ್ 4ರಂದು ಗೋವಾದ ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಜಶ್ರೀ ಎ. ಖಾಂಡೇಪಾರ್ಕರ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗಿ.

ಅಂತಿಮ ಮಾತುಗಳು: “ಪ್ರತಿಯೊಬ್ಬರ ಜೀವನವೂ ಎಂದಾದರೂ ಅಂತ್ಯಗೊಳ್ಳಲೇಬೇಕು. ಆದರೆ ಅದಕ್ಕೂ ಮುನ್ನ ನಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಿದೆಯೇ ಎಂದು ನನ್ನನ್ನು ನಾನೇ ಕೇಳಿಕೊಳ್ಳಬೇಕು” ಎಂದು ಮರಾಠಿಯಲ್ಲಿ ನೀಡಿದ ಹೇಳಿಕೆ.

ಆಸ್ಪತ್ರೆ ಸ್ಪಷ್ಟನೆ: ತೀವ್ರ ಹೃದಯಾಘಾತದಿಂದ ಬೆಳಿಗ್ಗೆ 5:20ಕ್ಕೆ ನಿಧನ. ಮರಣೋತ್ತರ ಪರೀಕ್ಷೆ ನಡೆಸಲು ಮೆಡಿಕೊ-ಲೀಗಲ್ ಪ್ರಕರಣ ದಾಖಲು.

ಕೊನೆಯ ಚಿತ್ರ: ಇತ್ತೀಚೆಗಷ್ಟೇ ಶಾಹಿದ್ ಕಪೂರ್ ಹಾಗೂ ತೃಪ್ತಿ ಡಿಮ್ರಿ ಜೊತೆ ‘ಓ ರೋಮಿಯೋ’ ಚಿತ್ರದಲ್ಲಿ ಅಭಿನಯಿಸಿದ್ದರು.

Share
Related Articles