SUDDIKSHANA KANNADA NEWS/ DAVANAGERE/ DATE:11-04-2025
ದಾವಣಗೆರೆ: ಮದ್ಯ ಸೇವನೆಗೆ ಹಣ ಕೊಡದ ಹಿನ್ನೆಲೆಯಲ್ಲಿ ತಾಯಿಯನ್ನು ಪುತ್ರ ಕೊಂದಿರುವ ಘಟನೆ ತಾಲೂಕಿನ ಐಗೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ರಾಘವೇಂದ್ರ ನಾಯ್ಕ (41) ಹತ್ಯೆ ಮಾಡಿದ ಆರೋಪಿ. ರತ್ನಾಬಾಯಿ (62) ಹತ್ಯೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಾಯಿ ಮತ್ತು ಪುತ್ರ ರಾಘವೇಂದ್ರ ಇದ್ದರು. ಈ ವೇಳೆ ಹಣ ನೀಡುವಂತೆ ರಾಘವೇಂದ್ರ ಪೀಡಿಸಿದ್ದಾನೆ. ಹಣ ಕೊಡಲು ರತ್ನಾಬಾಯಿ ಒಪ್ಪಿಲ್ಲ. ಇದರಿಂದ ಆಕ್ರೋಶಗೊಂಡ ರಾಘವೇಂದ್ರನು ದೊಣ್ಣಎಯಿಂದ ಹೊಡೆದು ಕೊಂದು ಹಾಕಿದ್ದಾನೆ. ರಾಘವೇಂದ್ರನ ಪತ್ನಿ ತವರು ಮನೆಗೆ ಮಕ್ಕಳ ಜೊತೆ ತೆರಳಿದ್ದರು.
ತಾಯಿಯನ್ನು ಕೊಂದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.