SUDDIKSHANA KANNADA NEWS/ DAVANAGERE/ DATE:26-10-2024
ಹೊಸದಿಲ್ಲಿ: 19 ವರ್ಷದ ಯುವತಿಯನ್ನು ಆಕೆ ಪ್ರಿಯಕರ ಮತ್ತು ಆತನ ಇಬ್ಬರು ಸಹಾಯಕರು ಕೊಂದು ಹೂತು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯುವತಿ ಗರ್ಭಿಣಿಯಾಗಿದ್ದಳು. ಬಳಿಕ ಮಗು ಬೇಡ ಎಂದು ಪ್ರಿಯಕರ ಹೇಳಿದ್ದ. ಆಕೆಯು ತನ್ನನ್ನು ಮದುವೆಯಾಗುವಂತೆ ಪ್ರಿಯಕರನನ್ನು ಕೇಳಿಕೊಂಡಳು. ಆದ್ರೆ, ಇದಕ್ಕೆ ಒಪ್ಪದ ಪ್ರಿಯಕರ ಆಕೆ ಉಸಿರುನಿಲ್ಲಿಸಿದ್ದಾನೆ.
ಇಂಥದ್ದೊಂದು ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಸೋನಿ 19 ವರ್ಷ ವಯಸ್ಸಿನ ಹದಿಹರೆಯದ ಯುವತಿ. ಪಶ್ಚಿಮ ದೆಹಲಿಯ ನಂಗ್ಲೋಯ್ ನಿವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಆಕೆ ಆರು ಸಾವಿರ ಫಾಲೋವರ್ಸ್ ಹೊಂದಿದ್ದಳು. ತನ್ನ ಮತ್ತು ತನ್ನ ಗೆಳೆಯ ಸಲೀಂನ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಳು. ಆಕೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿಯೂ ಸಲೀಂ ಪೋಸ್ಟ್ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಸಲೀಂನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಸಲೀಂ ಮಾತ್ರ ಮದುವೆಗೆ ಸಿದ್ದನಿರಲಿಲ್ಲ. ಆಕೆಗೆ ಗರ್ಭಪಾತ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳವಾಡುತ್ತಿದ್ದರು. ಆದ್ರೆ, ಸಲೀಂ ಮತ್ತು ಅವರ ಇಬ್ಬರು ಸ್ನೇಹಿತರು ಸೋನಿಳನ್ನು ಹರಿಯಾಣದ ರೋಹ್ಟಕ್ಗೆ ಕರೆದೊಯ್ದರು, ಅಲ್ಲಿ ಅವರು ಅವಳನ್ನು ಕೊಂದು ಶವವನ್ನು ಹೂತು ಹಾಕಿದ್ದಾರೆ. ಸಲೀಂ ಮತ್ತು ಆತನ ಒಬ್ಬ ಸಹಾಯಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.