
ಮುಂಬೈ: ಮುಂಬೈನ ಜನನಿಬಿಡ ಸ್ಥಳೀಯ ರೈಲಿನ ಒಳಗೆ ಮಹಿಳಾ ಗುಂಪೊಂದು ತಮ್ಮ ಸ್ನೇಹಿತೆಗಾಗಿ ಪ್ರೀ-ವೆಡ್ಡಿಂಗ್ (ಮದುವೆ ಪೂರ್ವ) ಆಚರಣೆಯನ್ನು ಆಯೋಜಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
केळवण (Kelvan)
A traditional Maharashtrian pre-wedding celebration, where family and friends shower the bride or groom with love, blessings and a special feast.
This time, not at home, but aboard a Mumbai local. pic.twitter.com/JvhXAGgF87
— Mumbai Heritage (@mumbaiheritage) November 27, 2026
ರೈಲು ಕೋಚ್‌ನಲ್ಲಿ ಹೂವುಗಳು ಮತ್ತು ಮಂಟಪದ ಮಾದರಿಯ ಅಲಂಕಾರಗಳನ್ನು ಮಾಡಿ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಗಿದೆ. ಆದರೆ, ಸಾರ್ವಜನಿಕ ರೈಲಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ನೆಟಿಗರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಮಹಿಳೆಯರು ರೈಲಿನ ಒಂದು ಭಾಗವನ್ನು ಹೂವುಗಳು ಮತ್ತು ಗೋಡೆಯ ಸ್ಟಿಕ್ಕರ್‌ಗಳಿಂದ ಅಲಂಕರಿಸಿರುವುದು ಕಂಡುಬಂದಿದೆ. ಮದುವೆಯಾಗಲಿರುವ ಯುವತಿ ರೈಲು ಹತ್ತಿದ ಕೂಡಲೇ ಆಕೆಗೆ ಹೂಮಳೆಗರೆದು, ಸಾಂಪ್ರದಾಯಿಕ ಆರತಿ ಹಾಗೂ ಶುಭ ಹಾರೈಕೆಗಳನ್ನು ಮಾಡಲಾಗಿದೆ.
ಪ್ರತಿದಿನ ಗಂಟೆಗಟ್ಟಲೆ ಪ್ರಯಾಣಿಸುವ ಮುಂಬೈ ನಿವಾಸಿಗಳಿಗೆ ಮನೆಯಲ್ಲಿ ಸಮಯ ಸಿಗದ ಕಾರಣ ಇಂತಹ ಆಚರಣೆಗಳನ್ನು ರೈಲಿನಲ್ಲೇ ಮಾಡುತ್ತಿದ್ದಾರೆ ಎಂದು ಕೆಲವರು ಸಮರ್ಥಿಸಿದರೆ, ಸಾರ್ವಜನಿಕ ಸ್ಥಳದಲ್ಲಿ ಇತರೆ ಪ್ರಯಾಸಿಕರಿಗೆ ತೊಂದರೆ ಉಂಟುಮಾಡುವ ಈ ನಡೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ರೈಲಿನಲ್ಲಿ ಅಲಂಕಾರ ಮತ್ತು ಸಂಭ್ರಮ: ಮುಂಬೈ ಲೋಕಲ್ ಟ್ರೈನ್ ಕೋಚ್ ಒಳಗೆ ಮಹಿಳೆಯರು ಹೂವಿನ ಅಲಂಕಾರದೊಂದಿಗೆ ಪೂಜಾ ಸಾಮಗ್ರಿಗಳನ್ನು ಹಿಡಿದು ಸ್ನೇಹಿತೆಗೆ ಅಚ್ಚರಿಯ ಪ್ರೀ-ವೆಡ್ಡಿಂಗ್ ಆಚರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ: ಸಾರ್ವಜನಿಕ ಸಾರಿಗೆಯನ್ನು ಸ್ವಂತ ಆಸ್ತಿಯಂತೆ ಬಳಸುತ್ತಿರುವುದೇಕೆ ಎಂದು ಕೆಲವರು ಪ್ರಶ್ನಿಸಿದ್ದರೆ, ದೈನಂದಿನ ಒತ್ತಡದ ಬದುಕಿನಲ್ಲಿ ಸಮಯದ ಅಭಾವದಿಂದಾಗಿ ಇಂತಹ ಪ್ರಯೋಗಗಳು ನಡೆಯುತ್ತಿವೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ರೈಲ್ವೆ ಸೇವಾ ಎಚ್ಚರಿಕೆ: ಈ ವೈರಲ್ ವೀಡಿಯೊದ ಬಗ್ಗೆ ಗಮನಹರಿಸಿರುವ ‘ರೈಲ್ವೆ ಸೇವಾ’ ಅಧಿಕೃತ ಖಾತೆಯು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಸೂಚಿಸಿದೆ.




