ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀಕ್ಷೇತ್ರ ಕೇಮಾರುಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ಈಶ ವಿಠಲದಾಸ ಸ್ವಾಮೀಜಿ ಅವರ ಜೊತೆ ಮಾತುಕತೆ ನಡೆಸಿದರು. ಶ್ರೀಗಳ ಆಶೀರ್ವಾದವನ್ನು ಸಂಸದರು ಪಡೆದರು.
ಕೇಮಾರುಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಗಮಿಸುತ್ತಿದ್ದಂತೆ ಈಶ ವಿಠಲದಾಸ ಸ್ವಾಮೀಜಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಸಂಸದರು ಶ್ರೀಗಳ ಜೊತೆ ಸಾಧನಾಶ್ರಮದ ಕುರಿತಂತೆ ಮಾಹಿತಿ ಪಡೆದರು.
ಪ್ರಮುಖ ಮುಖ್ಯಾಂಶಗಳು:
ಅಭಿವೃದ್ಧಿಗೆ ಭರವಸೆ: ಕೇಮಾರು ಶ್ರೀಕ್ಷೇತ್ರ ಮತ್ತು ಪ್ರಸ್ತುತ ನವೀಕರಣಗೊಳ್ಳುತ್ತಿರುವ ಕೊಲ್ಲೂರು ಶಾಖಾ ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ.
ಶ್ರೀಗಳ ಕಾರ್ಯಕ್ಕೆ ಪ್ರಶಂಸೆ: “ಕೇಮಾರು ಶ್ರೀಗಳು ಬಡವರು, ದೀನದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಜನಪ್ರಿಯತೆ ಗಳಿಸಿದ್ದಾರೆ. ಅವರು ಎಂದಿಗೂ ಯಾರ ಬಳಿಯೂ ಕೈಚಾಚದೆ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಆದರ್ಶ” ಎಂದು ಸಂಸದರು ಶ್ಲಾಘಿಸಿದರು.
ಆತ್ಮೀಯ ಸನ್ಮಾನ: ಸಂಸದರನ್ನು ಆತ್ಮೀಯವಾಗಿ ಸನ್ಮಾನಿಸಿದ ಈಶ ವಿಠಲದಾಸ ಸ್ವಾಮೀಜಿಯವರು, ಚೌಟ ಅವರು ಮತ್ತಷ್ಟು ಜನಮುಖಿಯಾಗಿ, ಬಡವರ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಲಿ ಎಂದು ಹಾರೈಸಿ ಕಿವಿಮಾತು ಹೇಳಿದರು.
ಕೇಮಾರು ಶ್ರೀಕ್ಷೇತ್ರ ಮತ್ತು ನವೀಕರಣವಾಗುತ್ತಿರುವ ಕೊಲ್ಲೂರು ಶಾಖಾ ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದರು ಭರವಸೆ ನೀಡಿದರು. ಶ್ರೀಗಳು ಯಾವಾಗಲೂ ಜನಪರ ಕಾರ್ಯಗಳನ್ನು ಮಾಡುತ್ತಾರೆ. ಬಡವರು. ದೀನದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಜನಪ್ರಿಯತೆ ಗಳಿಸಿದ್ದಾರೆ. ಭಕ್ತರ ಪಾಲಿಗೆ ಆರಾದ್ಯದೈವ ಆಗಿರುವ ಕೇಮಾರು ಶ್ರೀಗಳು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಯಾರ ಬಳಿಯೂ ಎಂದಿಗೂ ಕೈ ಚಾಚಿ ಬೇಡಿದವರಲ್ಲ. ಆದರೆ ಶ್ರೀಗಳ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಆದರ್ಶ ಎಂದು ಪ್ರಶಂಸೆ ವ್ಯಕ್ತಪಡಿಸಿದ ಸಂಸದರು, ಶ್ರೀಗಳ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.
ಉಪಸ್ಥಿತರಿದ್ದ ಪ್ರಮುಖರು:
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಸಹಕಾರಿ ಧುರೀಣರಾದ ದಯಾನಂದ ಪೈ, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಪಾಲಡ್ಕ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಕೇಮಾರು, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲು, ಮುಖಂಡರಾದ ವಿಠಲ ಮುಲ್ಕಿ, ಸುದರ್ಶನ್ ಆಚಾರ್ಯ ಕೇಮಾರು, ಜೀವಂಧರ್ ಶೆಟ್ಟಿಗಾರ್, ಚಂದ್ರ ಪೂಜಾರಿ, ಶಿವಪ್ರಸಾದ್ ಶೆಟ್ಟಿ, ರಂಜಿತ್ ಕೊಟ್ಯಾನ್, ಹರೀಶ್ ಪೂಜಾರಿ, ಶಾಶ್ವತ್ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.
ಆತ್ಮೀಯ ಗೌರವ:
ಇನ್ನು ಸಂಸದ ಬ್ರಿಜೇಶ್ ಚೌಟ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದ ಕೇಮಾರು ಸಾಧನಾಶ್ರಮದ ಈಶ ವಿಠಲ ದಾಸ ಸ್ವಾಮೀಜಿ ಅವರು, ಸಂಸದರು ನೀಡಿದ ಭರವಸೆ ತಮಗೆ ಖುಷಿ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಸಂಸದರಾಗಿರುವ ಚೌಟ ಅವರು ಮತ್ತಷ್ಟು ಜನಮುಖಿ, ಜನಪರ, ಬಡವರು, ದೀನದಲಿತರು ಸೇರಿದಂತೆ ಎಲ್ಲಾ ಸಮಾಜದವರ ಏಳಿಗೆಗೆ ಶ್ರಮಿಸಲಿ ಎಂದು ಕಿವಿಮಾತು ಹೇಳಿದರು.





Leave a comment