ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಜನರಿಗೆ ಸಿಹಿ ಸುದ್ದಿ. ನಿವೇಶನ ಇಲ್ಲ ಅಥವಾ ವಸತಿ ಇಲ್ಲ ಎಂಬ ಕೊರಗಿದೆಯೇ? ಹಾಗಿದ್ದರೆ ನಿಮಗಿದೋ ಸುವರ್ಣಾವಕಾಶ ಒದಗಿ ಬಂದಿದೆ.
ಆಶ್ರಯ ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳಿಂದ ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
READ ALSO THIS STORY: ದಾವಣಗೆರೆ Guest Teacher Recruitment 2026: ಮೊರಾರ್ಜಿ ವಸತಿ ಶಾಲೆಗಳಲ್ಲಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ
READ ALSO THIS STORY: ದಾವಣಗೆರೆ ಜನತೆಗೆ ಸುವಾರ್ತೆ: ಆಶ್ರಯ ಯೋಜನೆಯಡಿ ಉಚಿತ ನಿವೇಶನ, ಮನೆಗೆ ಅರ್ಜಿ ಅವಧಿ ವಿಸ್ತರಣೆ; ಯಾರಿಗೆಲ್ಲ ಸಿಗಲಿದೆ ಲಾಭ?
READ ALSO THIS STORY: ದಾವಣಗೆರೆ: ವಸತಿ ಯೋಜನೆಗೆ ಅರ್ಜಿ ಆಹ್ವಾನ: ಸಲ್ಲಿಕೆಗೆ ಜೂನ್ 12 ಕೊನೆಯ ದಿನ
ದಾವಣಗೆರೆಯಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆ:
2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತರನ್ನು ಗುರುತಿಸಿ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಇದೊಂದು ಉತ್ತಮ ಅವಕಾಶ ಆಗಿದ್ದು, ಫಲಾನುಭವಿಗಳಲ್ಲಿ ಯಾವೆಲ್ಲಾ ದಾಖಲಾತಿಗಳು ಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ಹಾಗಾಗಿ, ಇಲ್ಲಿ ಉತ್ತರ ಸಿಗಲಿದೆ ನಿಮಗೆ.
ಜೂನ್ 30ರವರೆಗೆ ವಿಸ್ತರಣೆ:
ಆಶ್ರಯ ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತರು ಅರ್ಜಿ ಸಲ್ಲಿಸಲು ಆಗಿಲ್ಲ ಎಂಬ ಕೊರಗು ಇದೆಯಾ? ಅಯ್ಯೋ ಎಂಥ ಅವಕಾಶ ಮಿಸ್ ಮಾಡಿಕೊಂಡು ಬಿಟ್ಟೆವು ಎಂಬ ನೋವು ಕಾಡುತ್ತಿದೆಯಾ? ಹಾಗಿದ್ದರೆ ಚಿಂತೆ ಮಾಡಬೇಡಿ. ನಿಮಗೆ ಇದೆ ಅವಕಾಶ.
ಮಹಾನಗರ ಪಾಲಿಕೆಯು ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಣೆ ಮಾಡಿದೆ.
ದಾವಣಗೆರೆಯಲ್ಲಿ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು:
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ನಿವಾಸಿಗಳಾಗಿರಬೇಕು. ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅರ್ಜಿ ಸಲ್ಲಿಸಬಹುದು.
ನಿವೇಶನ ಹೊಂದಿರುವವರು ಮನೆ ಕಟ್ಟಲು ಅನುದಾನ ಪಡೆಯಲು ಯಾವೆಲ್ಲಾ ದಾಖಲೆ ಬೇಕು?
ಕರ್ನಾಟಕದಲ್ಲಿ ಆಶ್ರಯ ಯೋಜನೆ (ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆ) ಅಡಿಯಲ್ಲಿ ಸಬ್ಸಿಡಿ ಅಥವಾ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ.
ಆಧಾರ್ ಕಾರ್ಡ್
ಆದಾಯ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ,
ಬ್ಯಾಂಕ್ ಪಾಸ್ ಬುಕ್
ಸ್ಥಳೀಯ ನಿವಾಸ/ಜಮೀನಿನ ದಾಖಲೆಗಳು ಕಡ್ಡಾಯ
ನಿವೇಶನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕು?
ಕರ್ನಾಟಕ ಸರ್ಕಾರ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ (RGRHCL) ಆಶ್ರಯ ಯೋಜನೆ/ಆವಾಸ್ ಯೋಜನೆಯಡಿ ನಿವೇಶನ ಅಥವಾ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕೇ ಬೇಕು.
ಆಧಾರ್ ಕಾರ್ಡ್
ಪಡಿತರ ಚೀಟಿ (BPL ಕಾರ್ಡ್)
ಆದಾಯ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ (SC/ST ವರ್ಗದವರಿಗೆ) ಅತ್ಯಗತ್ಯವಾಗಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ದಾಖಲೆಗಳ ಪಟ್ಟಿ ಇಂತಿದೆ:
ಆಧಾರ್ ಕಾರ್ಡ್:
ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗಳ ಪ್ರತಿ.
ಪಡಿತರ ಚೀಟಿ (BPL/ಅಂತ್ಯೋದಯ ಕಾರ್ಡ್):
ಬಡತನ ರೇಖೆಗಿಂತ ಕೆಳಗಿರುವವರಾಗಿರಬೇಕು.
ಆದಾಯ ಪ್ರಮಾಣಪತ್ರ:
ಕುಟುಂಬದ ವಾರ್ಷಿಕ ಆದಾಯದ ಪ್ರಮಾಣಪತ್ರ.ಜಾತಿ ಪ್ರಮಾಣಪತ್ರ:
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ (SC/ST) ಫಲಾನುಭವಿಗಳಾಗಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ವಾಸ ಸ್ಥಳ ದೃಢೀಕರಣ:
ನೀವು ಕರ್ನಾಟಕದ ನಿವಾಸಿ ಎಂದು ತೋರಿಸುವ ದಾಖಲೆ. ನಿವೇಶನ ರಹಿತರ ಪ್ರಮಾಣಪತ್ರ
ಫೋಟೋ:
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು.
ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
- Ashraya Yojana Davanagere
- Davanagere city corporation news
- Davanagere Mahanagara Palike housing scheme
- Davanagere site application last date
- Free site application Karnataka 2026
- How to apply for Ashraya Yojana 2026
- PMAY 2.0 Davanagere application
- PMAY 2.0 documents required
- PMAY urban online application
- Rajiv Gandhi Housing Corporation
- ಆಶ್ರಯ ಯೋಜನೆ ಅರ್ಜಿ ಸಲ್ಲಿಸಲು ದಾಖಲೆಗಳು
- ಆಶ್ರಯ ಯೋಜನೆ ಕೊನೆಯ ದಿನಾಂಕ
- ದಾವಣಗೆರೆ ಆಶ್ರಯ ಯೋಜನೆ
- ದಾವಣಗೆರೆ ಉಚಿತ ನಿವೇಶನ ಅರ್ಜಿ
- ದಾವಣಗೆರೆ ಮಹಾನಗರ ಪಾಲಿಕೆ ವಸತಿ ಯೋಜನೆ
- ನಿವೇಶನ ರಹಿತರ ಅರ್ಜಿ ಜೂನ್ 30
- ಪಿಎಂ ಆವಾಸ್ ನಗರ ಯೋಜನೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0
- ರಾಜೀವ್ ಗಾಂಧಿ ವಸತಿ ನಿಗಮ
- ವಸತಿ ರಹಿತರ ಫಲಾನುಭವಿಗಳ ಪಟ್ಟಿ





Leave a comment