SUDDIKSHANA KANNADA NEWS/ DAVANAGERE/ DATE:02-06-2023
ದಾವಣಗೆರೆ:(DAVANAGERE):ಕೆಲವರು ಎಲ್ಲೇ ಹೋದರೂ ಮನೆಗೆ ಬೈಕ್ ನಲ್ಲಿ ಬರುತ್ತಾರೆ. ಅದರಲ್ಲಿಯೂ ರಾತ್ರಿಯ ವೇಳೆ ಒಬ್ಬರೇ ಪ್ರಯಾಣಿಸುವುದು ಅಪಾಯಕಾರಿ. ಯಾಕೆಂದರೆ ಕತ್ತಲಾದ ಬಳಿಕ ಕೆಲವೆಡೆ ಜನರ (PEOPLE) ಸಂಚಾರವೇ ಇರುವುದಿಲ್ಲ.
ಇಂಥದ್ದನ್ನು ದುರುಪಯೋಗಪಡಿಸಿಕೊಳ್ಳುವ ಕೆಲ ಖದೀಮರು ಮಾಡುವ ಕೃತ್ಯದಿಂದ ಒಬ್ಬರೇ ಸಂಚಾರ ಮಾಡುವುದು ಕಷ್ಟ ಎಂಬಂತ ಸ್ಥಿತಿ ನಿರ್ಮಾಣವಾಗುವಂತೆ ಮಾಡುತ್ತದೆ. ಹಾಗಾಗಿ, ಸಂಚಾರ ಮಾಡುವಾಗ ಹುಷಾರಾಗಿರಬೇಕು.
ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವಾಗ ಎಚ್ಚರ ವಹಿಸಲೇಬೇಕು.
ಸ್ನೇಹಿತರು ಅಥವಾ ಸಂಬಂಧಿಕರನ್ನಾದರೂ ಕರೆದುಕೊಂಡು ಹೋಗಬೇಕು. ಒಬ್ಬರೇ ಹೋಗಬೇಡಿ, ಹುಷಾರಾಗಿ ಹೋಗಿ, ಮನೆಗೆ ಹೋದ ಮೇಲೆ ಫೋನ್ ಮಾಡಿ ತಿಳಿಸಿ ಎಂದು ಈಗಲೂ ಹೇಳುತ್ತಲೇ ಇರುತ್ತಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಚಿತ್ರದುರ್ಗ (CHITHRADURGA)ದಿಂದ ದಾವಣಗೆರೆ (DAVANAGERE) ಜಿಲ್ಲೆಯ ಹರಿಹರ(HARIHARA)ಕ್ಕೆ ಬರುವಾಗ ಎದುರಿಸಿದ ಸಂಕಷ್ಟ ಯಾರಿಗೂ ಬರಬಾರದು.
ಹಾಗಾದ್ರೆ ಆಗಿದ್ದೇನು…?
ಚಿತ್ರದುರ್ಗದಿಂದ ಹರಿಹರಕ್ಕೆ ತನ್ನ ಬೈಕ್ ನಲ್ಲಿ ವ್ಯಕ್ತಿಯೊಬ್ಬರು ತೆರಳುತ್ತಿದ್ದಾಗ ಅಡ್ಡಗಟ್ಟಿದ್ದ ಮೂವರು ಯುವಕರು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಬೇರೆಯವರಿಗೆ ತಿಳಿಸಲು ಒದ್ದಾಡಿ ಕೊನೆಗೂ ಬೈಕ್ ನಲ್ಲಿ ಮನೆಗೆ ಬಂದು ನಡೆದ ಘಟನೆ ವಿವರಿಸಿದ್ದಾರೆ. ಬಳಿಕ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.
ಎಲ್ಲಿ (WHERE) ಅಡ್ಡಗಟ್ಟಿ ದರೋಡೆ ಮಾಡಿದ್ದು..?
ಹರಿಹರ ಪಟ್ಟಣದ ಹೆಚ್. ಜಿ. ನಟರಾಜ್ ಎಂಬುವವರು ಏಪ್ರಿಲ್ 22 ರಂದು ಚಿತ್ರದುರ್ಗದಿಂದ ಹರಿಹರಕ್ಕೆ ತನ್ನ ಬೈಕ್ ನಲ್ಲಿ ಸುಮಾರು ರಾತ್ರಿ 10.20 ರ ಸುಮಾರಿಗೆ ದಾವಣಗೆರೆ ತಾಲ್ಲೂಕಿನ ಹೆಚ್. ಕಲ್ಪನಹಳ್ಳಿ ಬಳಿಯ ಅಪೂರ್ವ ಹೊಟೇಲ್ ಹತ್ತಿರ
ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಬೈಕ್ ನಲ್ಲಿ ಮೂವರು ಅಡ್ಡಗಟ್ಟಿ 15 ಸಾವಿರ ರೂಪಾಯಿ ಮೌಲ್ಯದ ಒಪೋ ಕಂಪೆನಿಯ ಮೊಬೈಲ್ ಕಸಿದು ಪರಾರಿಯಾಗಿದ್ದರು.
ಮೂವರು ಆರೋಪಿಗಳ ಬಂಧನ (ARREST):
ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾವಣಗೆರೆ ಗ್ರಾಮಾಂತರ ಉಪ ವಿಬಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸ್ ಇನ್ ಸ್ಪೆಕ್ಟರ್ ಲಿಂಗನಗೌಡ ನೆಗಳೂರು ಅವರು ಅಪರಾಧ ವಿಭಾಗದ ಸಿಬ್ಬಂದಿಯೊಂದಿಗೆ ತೆರಳಿ ದಾವಣಗೆರೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ತೂಹಿದ್ (27), ಫರೋಜ್ ಅಹಮದ್ (22) ಹಾಗೂ ಫ್ಲಂಬರ್ ಕೆಲಸಗಾರ ಅಮಾನುಲ್ಲಾ ಅಲಿಯಾಸ್ ಅಮಾನ್ (22)ನನ್ನು ಬಂಧಿಸಿದ್ದಾರೆ.
ಆರೋಪಿಗಳು ಸುಲಿಗೆ ಮಾಡಿದ್ದ ಓಪೋ ಕಂಪನಿಯ 15 ಸಾವಿರ ಬೆಲೆಯ ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ 20 ಸಾವಿರ ಬೆಲೆಯ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.