SUDDIKSHANA KANNADA NEWS/ DAVANAGERE/ DATE:31-03-2025
ಬೆಂಗಳೂರು: ಸಚಿವ ಕೆ. ಎನ್. ರಾಜಣ್ಣರ ಪುತ್ರ ರಾಜೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಬಹಿರಂಗವಾಗಿದೆ. ಈ ಆಡಿಯೋದಲ್ಲಿ ರಾಜೇಂದ್ರ ಹತ್ಯೆಗೆ ಸ್ಕೆಚ್ ರೂಪಿಸಿರುವುದು ಬೆಳಕಿಗೆ ಬಂದಿದೆ. ತಮಿಳು ಹುಡುಗರಿಗೆ ಸುಪಾರಿ
ನೀಡಲಾಗಿತ್ತು ಎಂಬ ವಿಚಾರ ಗೊತ್ತಾಗಿದೆ.
ಪೊಲೀಸರಿಗೆ ರಾಜೇಂದ್ರ ಅವರು ಈ ಆಡಿಯೋ ನೀಡಿದ್ದು, ಆಡಿಯೋ ಕೇಳಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜಯಪುರ ಸೋಮನಿಗೆ ಪರಿಚಯವಿರುವ ಪುಷ್ಪಾ ಎಂಬಾಕೆ ಜೊತೆ ಮೊಬೈಲ್ ನಲ್ಲಿ ನಡೆಸಿರುವ ಮಾತುಕತೆ ಬಹಿರಂಗವಾಗಿದೆ.
ಕಲಾಸಿಪಾಳ್ಯದ ತಮಿಳು ಹುಡುಗರಿಗೆ ಸುಪಾರಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. 70 ಲಕ್ಷ ರೂಪಾಯಿಗೆ ಹತ್ಯೆ ಮಾಡಲು ಡೀಲ್ ಆಗಿತ್ತು. ಮುಂಗಡವಾಗಿ 5 ಲಕ್ಷ ರೂಪಾಯಿ
ನೀಡಲಾಗಿತ್ತು ಎಂದು ತಿಳಿದು ಬಂದಿದ್ದು, ಆದ್ರೆ, ಸುಪಾರಿ ಕೊಟ್ಟವರು ಯಾರು ಎಂಬ ಬಗ್ಗೆ ಬಹಿರಂಗವಾಗಿಲ್ಲ.
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟುಮಾಡಿದ್ದ ಹನಿಟ್ರ್ಯಾಪ್ ಪ್ರಕರಣ ಇದೀಗ ಕೊಲೆ ಯತ್ನದವರೆಗೂ ಹೋಗಿದೆ. ಸಚಿವ ಕೆಎನ್ ರಾಜಣ್ಣ ಹಾಗೂ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದ್ದ ಬೆನ್ನಲ್ಲೇ ಹತ್ಯೆಗೆ ಸಂಚು ರೂಪಿಸಿದ್ದು ಗೊತ್ತಾಗಿದೆ.
ಬೆಂಗಳೂರಿನ ಪ್ರಭಾವಿ ನಾಯಕರ ಮೇಲೆ ಬೆರಳು ಮಾಡಿದ್ದು, ಈ ಆರೋಪಕ್ಕೆ ಸಾಕ್ಷಿ ಎಂಬಂತೆ ಆಡಿಯೋವೊಂದನ್ನು ಇದೀಗ ಒದಗಿಸಲಾಗಿದೆ. ಸಚಿವ ರಾಜಣ್ಣ ಪುತ್ರ ರಾಜೇಂದ್ರ ಹತ್ಯೆಗೆ ಯತ್ನ ಪ್ರಕರಣ ತನಿಖೆಯನ್ನು ಕ್ಯಾತಸಂದ್ರ ಪೊಲೀಸರು ಚುರುಕುಗೊಳಿಸಿದ್ದಾರೆ. ಎಂಎಲ್‌ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿಇಬ್ಬರ ಮಾತಿನ ಸಂಭಾಷಣೆ ಇದ್ದು, ಪುಷ್ಪ ಹಾಗೂ ರಾಕಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಆಡಿಯೋದಿಂದಲೇ ಕೊಲೆ ಸುಪಾರಿ ಸಂಚು ಬಯಲಿಗೆ ಬಂದಿದೆ
ಸುಪಾರಿ ಸಂಚಿನ ಇಂಚಿಂಚು ಮಾಹಿತಿಯ ಆಡಿಯೋದಿಂದಲೇ ಕೊಲೆ ಸುಪಾರಿಯ ವಿಚಾರ ರಾಜೇಂದ್ರಗೆ ತಿಳಿದಿದೆ. ದೂರಿನ ಜೊತೆ ಪೆನ್ ಡ್ರೈವ್ ನೀಡಲಾಗಿದ್ದು, ಅದರಲ್ಲಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಮಹಿಳೆ ಪುಷ್ಪ ಅವರಿಗೆ
ಆರೋಪಿ ರಾಕಿ ಇಂಚಿಂಚು ವಿವರಿಸಿದ್ದಾರೆ. ಇದೇ ಮಹಿಳೆಯ ಆಡಿಯೋ ಆಧರಿಸಿ ಎಂಎಲ್ಸಿ ರಾಜೇಂದ್ರ ದೂರು ದಾಖಲಿಸಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಆಡಿಯೋ ಅದಾಗಿದ್ದು, ಪ್ರಕರಣದ ಎ1 ಆರೋಪಿ ಸೋಮನ ಪ್ಲಾನ್ ಬಗ್ಗೆ ಮಹಿಳೆ ಇಂಚಿಂಚು ವಿವರಿಸಿದ್ದಾರೆ. ಆರೋಪಿ ಜೈಪುರ ಸೋಮನಿಗೆ ಪುಷ್ಪ ಪರಿಚಯಸ್ಥಳು. ರಾಜೇಂದ್ರರನ್ನ ಹತ್ಯೆ ಮಾಡಲು ಸುಪಾರಿ ಪಡೆದಿರೋದಾಗಿ ಸೋಮ, ಪುಷ್ಪಾಳ ಬಳಿ ಹೇಳಿಕೊಂಡಿದ್ದನಂತೆ. ಆ ಬಳಿಕ ಸುಪಾರಿಯ ಬಗ್ಗೆ ಪುಷ್ಪ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ ಎಂದು ಹೇಳಲಾಗಿದೆ.