SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ನಾಲ್ಕನೇ ತರಗತಿಯಿಂದಲೇ ಯೋಗ ಕಲಿತು ರಾಜ್ಯ, ಅಂತಾರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ನೇಪಾಳ ವಿಯೆಟ್ನಾಂನಲ್ಲಿ ಸತತ ಯೋಗ ಸ್ಪರ್ಧೆಗಳಲ್ಲಿ ಹಲವು ಚಿನ್ನದ ಪದಕ, ಬೆಳ್ಳಿ ಪದಕಗೆದ್ದು ದಾವಣಗೆರೆ ಜಿಲ್ಲೆಗೆ ಹರಿಹರದ ಸೃಷ್ಟಿ ಕೆ. ವೈ. ಅವರು ಹಿರಿಮೆ ತಂದಿದ್ದಾರೆ. ಅದರಂತೆ ಈಗ ರಾಷ್ಟ್ರಮಟ್ಟದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಕಳೆದ ಫೆ.3ರಿಂದ 6ರವರೆಗೆ ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ಸೃಷ್ಟಿ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ. ಕರ್ನಾಟಕ ರಾಜ್ಯದಿಂದ 8 ಕಿರಿಯ ಯೋಗಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ ಜಿಲ್ಲೆಯ ಹರಿಹರದ ಸೃಷ್ಟಿ ಹಾಗೂ ನಮಿತಾ ಎಂಬ ಕಿರಿಯ ವಿಭಾಗದಲ್ಲಿ ಸ್ಪರ್ಧೆಯಲ್ಲಿಭಾಗವಹಿಸಿದ್ದರು.
ಅದರಲ್ಲಿ ಸೃಷ್ಟಿ ಯೋಗದಲ್ಲಿ ನಾಲ್ಕನೇ ಸ್ಥಾನ ಪಡೆದ ಏಕೈಕ ಬಾಲ ಯೋಗಪಟು ಆಗಿದ್ದಾರೆ. ಸೃಷ್ಟಿಯ ಈ ಸಾಧನೆಗೆ ಸ್ವತಃ ಯೋಗ ಶಿಕ್ಷಕಿಯಾಗಿರುವ ದಾವಣಗೆರೆ ಇಪ್ಟಾ ಕಲಾ ತಂಡದ ಉಪಾಧ್ಯಕ್ಷೆ, ಕಲಾವಿದೆ ಶಾಂಭವಿ ಅವರ ಏಕೈಕ ಪುತ್ರಿ.
ಹರಿಹರದಲ್ಲಿ ಈಕೆ ಅಭ್ಯಾಸ ಮಾಡುತ್ತಿದ್ದು, ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಹಿರಿಯ ಪತ್ರಕರ್ತ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಎಸ್. ಕೆ. ಒಡೆಯರ್, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅವರ ಸಂಪಾದಕತ್ವದ ಮಲ್ನಾಡವಾಣಿ ಪತ್ರಿಕೆ ಬಳಗ, ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ, ಸಂಘಟಕ ಕಲಾವಿದ ಹೋರಾಟಗಾರ ಪುರಂದರ್ ಲೋಕಿಕೆರೆ, ಓ. ಎನ್. ಸಿದ್ದಯ್ಯ, ಇನ್ ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರು, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ವಿನಯ್ ಕುಮಾರ್, ಜಿಲ್ಲೆಯ ಭಾರತೀಯ ಜನ ಕಲಾ ಸಮಿತಿ ಇಪ್ಟಾ ಕಲಾ ತಂಡ ಕಲಾವಿದರು, ಹರಿಹರ ಆರ್ಯಭಟ ಕಬ್ಬಡಿ ಸಂಸ್ಥೆ ನಿಜಗುಣ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ರಾಷ್ಟ್ರ ಮಟ್ಟದಲ್ಲಿನ ಸೃಷ್ಟಿ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.