SUDDIKSHANA KANNADA NEWS/ DAVANAGERE/ DATE:01-10-2024
ದಾವಣಗೆರೆ: ಮಹಾನಗರ ಪಾಲಿತೆಯ ನೂತನ ಮೇಯರ್ ಆದ ಕೆ. ಚಮನ್ ಸಾಬ್ ಅವರಿಗೆ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲೀದ್ ಅಹ್ಮದ್ ನೇತೃತ್ವದ ತಂಡ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.
ಈ ವೇಳೆ ಮಾತನಾಡಿದ ಖಾಲಿದ್ ಅಹ್ಮದ್ ಅವರು, ಚಮನ್ ಸಾಬ್ ಅವರು ತುಂಬಾ ಹಿರಿಯರು. ಮಹಾನಗರ ಪಾಲಿಕೆಯಲ್ಲಿ ಸತತವಾಗಿ ಗೆದ್ದು ಬಂದವರು. ಮಾತ್ರವಲ್ಲ, ವಾರ್ಡ್ ನಲ್ಲಿ ಜನರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಿರಿತನದ ಆಧಾರದಲ್ಲಿ ಅವರಿಗೆ ಮೇಯರ್ ಹುದ್ದೆ ಸಿಕ್ಕಿದೆ. ಇದು ನಮಗೆಲ್ಲರಿಗೂ ಖುಷಿ ತಂದಿದೆ ಎಂದು ತಿಳಿಸಿದರು.
ಅವಧಿ ಕಡಿಮೆ ಆಗಿದ್ದರೂ ಪಾಲಿಕೆ ಸದಸ್ಯರಾಗಿ ಹೆಚ್ಚು ಅನುಭವ ಹೊಂದಿರುವ ಚಮನ್ ಸಾಬ್ ಅವರಿಂದ ಅತ್ಯುತ್ತಮ ಕಾರ್ಯಗಳಾಗಲಿ. ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಿ. ಪಾರದರ್ಶಕ ಆಡಳಿತ ಕೊಡಲಿ ಎಂದು ಅವರಲ್ಲಿ ವಿನಂತಿಸುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಅಲ್ಪಸಂಖ್ಯಾತರಿಗೆ ಮೇಯರ್ ಸಿಕ್ಕಿದ್ದು ಇದೇ ಮೊದಲು. ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕಾರ್ಪೊರೇಟರ್ ಗಳು ಸೇರಿ ಚಮನ್ ಸಾಬ್ ಅವರನ್ನು ಮೇಯರ್ ಆಗಿ ಮತ್ತು ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಅವರನ್ನು ಆರಿಸಲಾಗಿದೆ. ಪಾಲಿಕೆಯಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಎಲ್ಲರ ಜನಮನ್ನಣೆ ಗಳಿಸಲಿ ಎಂದು ಖಾಲಿದ್ ಅಹ್ಮದ್ ಅವರು ತಿಳಿಸಿದರು.
ಕೆ. ಚಮನ್ ಸಾಬ್ ಮತ್ತು ನನ್ನ ತಂದೆ ಆತ್ಮೀಯರು. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡಿರುವ ಚಮನ್ ಸಾಬ್ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು. ಪಾಲಿಕೆಯ ಸದಸ್ಯರಾಗಿ ಅತ್ಯುತ್ತಮವಾಗಿ ಜನಸೇವೆ ಸಲ್ಲಿಸದ್ದು, ಮೇಯರ್ ಆಗಿಯೂ ಮುಂದುವರಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸೈಯದ್ ಜೀಶನ್ ಅಲಿ, ಫಜ್ಲೂ ರೆಹಮಾನ್, ಜೂಫಿಶನ್ ಅಲಿ, ಮಹಬೂಬ್ ಬಾಷಾ, ಆರೀಫ್ ಅಲಿ, ಸಂತೋಷ್ ಆರ್. ಉಪಸ್ಥಿತರಿದ್ದರು.