ಉತ್ತರ ಪ್ರದೇಶದ ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಸೀಮ್ ಅರುಣ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭದ್ರತಾ ಮುಖ್ಯಸ್ಥರಾಗಿದ್ದರು. ಅವರು 2004 ಮತ್ತು 2008 ರ ನಡುವೆ 22 ಜನರ ಕಮಾಂಡೋ ತಂಡದ ಭಾಗವಾಗಿದ್ದರು.
ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ್ ಅವರು 2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಎಸ್ಪಿಜಿಯಲ್ಲಿ ಪ್ರಧಾನ ಮಂತ್ರಿಯ ಭದ್ರತೆಯ ಆಂತರಿಕ ವಲಯವಿದೆ – ಕ್ಲೋಸ್ ಪ್ರೊಟೆಕ್ಷನ್ ಟೀಮ್ ಅನ್ನು ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತ್ತು. ಅವರಿಗೆ ನೆರಳಾಗಿ ನಿಲ್ಲುವ ಜವಾಬ್ದಾರಿ ನನ್ನದಾಗಿತ್ತು
ಡಾ. ಮನಮೋಹನ್ ಸಿಂಗ್ ಅವರ ಬಳಿ ಇದ್ದ ಏಕೈಕ ಕಾರು ಮಾರುತಿ 800 ಆಗಿತ್ತು. ಇದು ಪಿಎಂ ಹೌಸ್ ಎದುರು ಮಿನುಗುತ್ತಿರುವ ಕಪ್ಪು ಬಿಎಂಡಬ್ಲ್ಯೂ ಕಾರಿನ ಹಿಂಭಾಗ ನಿಂತಿತ್ತು. ಮನಮೋಹನ್ ಸಿಂಗ್ ಭದ್ರತಾ ದೃಷ್ಟಿಯಿಂದ ದೊಡ್ಡ ಕಾರಿನಲ್ಲಿ ಪ್ರಯಾಣಿಸುವಾಗಲೆಲ್ಲಾ ನನಗೆ ಈ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ, ಆದರೆ ಭದ್ರತಾ ದೃಷ್ಟಿಯಿಂದ ಅನಿವಾರ್ಯ, ಮಾರುತಿ ನನ್ನ ಕಾರೆಂದು ಹೇಳುತ್ತಿದ್ದರು ಎಂದು ಅಸೀಮ್ ನೆನಪಿಸಿಕೊಂಡಿದ್ದಾರೆ.