Home ಕ್ರೈಂ ನ್ಯೂಸ್ ಕೇವಲ 2 ನಿಮಿಷದಲ್ಲಿ ಯಮಸ್ವರೂಪಿಯಾದ ಜಲಪಾತ: ಪ್ರವಾಸಿಗರು ಪಾರಾಗಿದ್ದು ಹೇಗೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೇವಲ 2 ನಿಮಿಷದಲ್ಲಿ ಯಮಸ್ವರೂಪಿಯಾದ ಜಲಪಾತ: ಪ್ರವಾಸಿಗರು ಪಾರಾಗಿದ್ದು ಹೇಗೆ?

Share
ಜಲಪಾತ
Share

ಪಾಲ್ಘರ್: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಪ್ರವಾಸಿ ತಾಣವೊಂದರಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪ್ರಸಿದ್ಧ ವಂಡ್ರಿ ಕೆರೆ ಜಲಪಾತದಲ್ಲಿ (Vandri Lake Waterfall) ಮೋಜು ಮಸ್ತಿ ಮಾಡಲು ಹೋಗಿದ್ದ ಪ್ರವಾಸಿಗರು ಕೇವಲ ಎರಡೇ ನಿಮಿಷಗಳಲ್ಲಿ ಜಲಪ್ರಳಯಕ್ಕೆ ಸಿಲುಕಿ ಪರದಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಜಲಪಾತದ ಮೇಲ್ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಠಾತ್ ಆಗಿ ನೀರಿನ ಮಟ್ಟ ಹೆಚ್ಚಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತಾರು ಪ್ರವಾಸಿಗರು ತೀವ್ರವಾಗಿ ಹರಿಯುತ್ತಿದ್ದ ಕೆಸರು ನೀರಿನ ಸುಳಿಗೆ ಸಿಲುಕಿದರು.

ನೀರಿನ ವೇಗಕ್ಕೆ ಕೊಚ್ಚಿಹೋಗದಂತೆ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಪ್ರಾಣಭಯದಿಂದ ಎತ್ತರದ ಪ್ರದೇಶದ ಕಡೆಗೆ ಸಾಗಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಸ್ಥಳೀಯ ನಿವಾಸಿಗಳು ಹಾಗೂ ಸಹ ಪ್ರವಾಸಿಗರ ಸಮಯಪ್ರಜ್ಞೆಯಿಂದಾಗಿ ಜಲಪಾತದಲ್ಲಿ ಸಿಲುಕಿದ್ದ ಎಲ್ಲರನ್ನೂ ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸೋಶಿಯಲ್ ಮೀಡಿಯಾ ರೀಲ್ಸ್ ಹಾಗೂ ಪ್ರವಾಸದ ಮೋಜಿನ ಆಟಕ್ಕಿಂತ ಜೀವ ಮುಖ್ಯ, ಮುಂಗಾರು ಅವಧಿಯಲ್ಲಿ ಜಲಪಾತ ಮತ್ತು ನದಿಗಳ ಬಳಿ ಹೋಗುವಾಗ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳು ಹಾಗೂ ವಿಡಿಯೋ ಹಂಚಿಕೊಂಡ ಪ್ರವಾಸಿಗರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles