Home ಕ್ರೈಂ ನ್ಯೂಸ್ 522 ಹೋಟೆಲ್‌ಗಳು, 893 ಪಬ್‌ಗಳು, 62 ಡ್ಯಾನ್ಸ್‌ ಬಾರ್‌ಗಳು, 53 ಮನರಂಜನಾ ಕ್ಲಬ್‌ಗಳು ಸೇರಿದಂತೆ ವಿವಿಧೆಡೆ ದಾಳಿ: ಜನರ ನೆಮ್ಮದಿಗಾಗಿ ರೈಡ್ ಎಂದ್ರು ಪ್ರಿಯಾಂಕ್ ಖರ್ಗೆ…!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

522 ಹೋಟೆಲ್‌ಗಳು, 893 ಪಬ್‌ಗಳು, 62 ಡ್ಯಾನ್ಸ್‌ ಬಾರ್‌ಗಳು, 53 ಮನರಂಜನಾ ಕ್ಲಬ್‌ಗಳು ಸೇರಿದಂತೆ ವಿವಿಧೆಡೆ ದಾಳಿ: ಜನರ ನೆಮ್ಮದಿಗಾಗಿ ರೈಡ್ ಎಂದ್ರು ಪ್ರಿಯಾಂಕ್ ಖರ್ಗೆ…!

Share
ನರೇಂದ್ರ ಮೋದಿ
Share

ಬೆಂಗಳೂರು: ಸುರಕ್ಷಿತ ಬೆಂಗಳೂರಿಗಾಗಿ ಪೊಲೀಸ್ ಇಲಾಖೆಯ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಾನೂನು ಉಲ್ಲಂಘನೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಒಂದೇ ದಿನ 1,530 ಸಂಸ್ಥೆಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆದಿದ್ದು, 522 ಹೋಟೆಲ್‌ಗಳು,
▪893 ಪಬ್‌ಗಳು, 62 ಡ್ಯಾನ್ಸ್‌ ಬಾರ್‌ಗಳು, 53 ಮನರಂಜನಾ ಕ್ಲಬ್‌ಗಳು ಸೇರಿದಂತೆ ವಿವಿಧೆಡೆ ದಾಳಿ ಮಾಡಿ 650ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಒಟಿಪಿಎ ಮತ್ತು ಅಬಕಾರಿ ನಿಯಮಗಳ ಉಲ್ಲಂಘನೆ, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ. ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ, ಸಾರ್ವಜನಿಕರ ನೆಮ್ಮದಿಯ ವಿಚಾರದಲ್ಲಿ ರಾಜಿಯಿಲ್ಲ ಎಂದಿದ್ದಾರೆ.

ಇದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ಜನರ ಸುರಕ್ಷತೆ ಮತ್ತು ನೆಮ್ಮದಿಯೇ ಗ್ಯಾರಂಟಿ ಸರ್ಕಾರದ ಆದ್ಯತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles