ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಮೇ 25 ರಿಂದ ಜುಲೈ 31 ರವರೆಗೆ ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿದ್ದು, 3,137 ಆಹಾರ ಸಂಸ್ಥೆಗಳನ್ನು ತನಿಖೆಗೊಳಪಡಿಸಿದೆ. ಈ ಅವಧಿಯಲ್ಲಿ ₹55.72 ಕೋಟಿ ಮೌಲ್ಯದ 28.66 ಲಕ್ಷ ಕೆಜಿ ಸುರಕ್ಷಿತವಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಅಥವಾ ನಾಶಪಡಿಸಲಾಗಿದೆ.
ಬ್ಯಾನ್ ಮಾಡಲಾದ ವಸ್ತುಗಳು: ₹15.11 ಕೋಟಿ ಮೌಲ್ಯದ ಗುಟ್ಕಾ ಮತ್ತು ಪಾನ್ ಮಸಾಲಾ ಜಪ್ತಿ.
ಕಾನೂನು ಕ್ರಮ: 519 ಎಫ್‌ಐಆರ್ ದಾಖಲಿಸಲಾಗಿದ್ದು, 701 ಜನರನ್ನು ಬಂಧಿಸಲಾಗಿದೆ ಹಾಗೂ 165 ಸಂಸ್ಥೆಗಳ ಪರವಾನಗಿ ಅಮಾನತುಗೊಳಿಸಲಾಗಿದೆ.
ಆರೋಪಕ್ಕೆ ಸ್ಪಷ್ಟನೆ: ಆಯ್ದ ಹೋಟೆಲ್‌ಗಳನ್ನು ಮಾತ್ರ ಗುರಿಮಾಡಲಾಗಿದೆ ಎಂಬ ಆರೋಪವನ್ನು ಎಫ್‌ಡಿಎ ಕಮಿಷನರ್ ತುಕಾರಾಂ ಮುಂಧೆ ತಳ್ಳಿಹಾಕಿದ್ದು, ಪ್ರತಿಯೊಂದು ಕ್ರಮವನ್ನು ನಿಯಮಾನುಸಾರವೇ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.





Leave a comment