ರಾಯ್‌ಪುರ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ವೀವ್ಸ್ ಹಾಗೂ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಹುಚ್ಚಾಟ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದಕ್ಕೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿದೆ ಎನ್ನಲಾದ ಘಟನೆಯೇ ಸಾಕ್ಷಿ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಧುವೊಬ್ಬಳು ತನ್ನ ಮೊದಲ ರಾತ್ರಿಗೆ (ಶೋಭನ) ಸಂಬಂಧಿಸಿದ ಖಾಸಗಿ ಕ್ಷಣಗಳ ವಿಡಿಯೋವನ್ನು ಕ್ಯಾಮೆರಾ ಮುಂದೆ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ಈ ವಿಡಿಯೋವನ್ನು ಆಕೆಯ ಪತಿಯೇ ಚಿತ್ರೀಕರಿಸಿದ್ದು, ಅಂತರ್ಜಾಲದಲ್ಲಿ ಹಂಚಿಕೊಂಡ ಕೆಲವೇ 18 ಗಂಟೆಗಳಲ್ಲಿ ಭರ್ಜರಿ 110 ಮಿಲಿಯನ್ (11 ಕೋಟಿ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೇವಲ ವೈರಲ್ ಆಗುವ ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿರುವ ಆಸೆಯಿಂದ ವೈಯಕ್ತಿಕ ಗೌರವ, ಖಾಸಗಿತನ ಹಾಗೂ ದಾಂಪತ್ಯದ ಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಸಕ್ರಿಯವಾಗಿರುವಾಗ, ಇಂತಹ ಸೂಕ್ಷ್ಮ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಹಂಚಿಕೊಳ್ಳುವುದು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವರು ಎಚ್ಚರಿಸಿದ್ದಾರೆ. ಡಿಜಿಟಲ್ ಜಗತ್ತಿನ ತಾತ್ಕಾಲಿಕ ಜನಪ್ರಿಯತೆಗಿಂತ ವೈಯಕ್ತಿಕ ಗೌರವ ಮತ್ತು ಸ್ವಯಂ ನಿಯಂತ್ರಣ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
- 110 million views viral video
- newlywed couple first night video
- private life privacy issue
- raipur news kannada
- social media addiction
- trending reels controversy
- viral content social media
- viral video raipur
- ಖಾಸಗಿತನ ಮತ್ತು ಗೌರವ
- ನವವಧು ಮೊದಲ ರಾತ್ರಿ ವಿಡಿಯೋ
- ರಾಯ್‌ಪುರ ವೈರಲ್ ವಿಡಿಯೋ
- ಲೈಕ್ಸ್ ಹುಚ್ಚಾಟ
- ವೈರಲ್ ವಿಡಿಯೋ 11 ಕೋಟಿ ವೀವ್ಸ್
- ಶೋಭನ ವಿಡಿಯೋ ಕಂಟೆಂಟ್
- ಸೋಶಿಯಲ್ ಮೀಡಿಯಾ ವೈರಲ್
- ಸೋಷಿಯಲ್ ಮೀಡಿಯಾ ಚರ್ಚೆ





Leave a comment